ವೀ.ವಿ.ಸಂಘದಲ್ಲಿ ಗೌರವ ಸನ್ಮಾನ ದೇಶಕ್ಕೆಹೊಸ ತಿರುವ ಕೊಡುವ ಮಹಾ ಚುನಾವಣೆಗೆ ಸಮುದಾಯದ ಬೆಂಬಲ ಬೇಕು: ವಿಜಯೇಂದ್ರ

module: NormalModule; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 59.0;


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.12: ದೇಶದ ಆಗುಹೋಗುಗಳನ್ನು ಸಮುದಾಯ ತಿಳಿದಿದೆ. ದೇಶಕ್ಕೆ ಹೊಸ ತಿರುವ ಕೊಡುವ ಮಹಾ ಚುನಾವಣೆ ಇದಾಗಿದ್ದು ಸಮುದಾಯದ ಜನತೆ ಬೆಂಬಲ ಅಗತ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವೀರಶೈವ ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಅವರು ಇಂದು ನಗರದ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ. ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಬಸವರಾಜ್, ಕಾರ್ಯದಶಿ ಡಾ ಅರವಿಂದ ಪಟೇಲ್, ಖಜಾಂಚಿ ಬಯಲು ವದ್ದಿಗೇರಿ ಎರ್ರಿಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಿಂದ  ಸನ್ಮಾನಿತರಾಗಿ ಮಾತನಾಡುತ್ತಿದ್ದರು.
ಈ ಸಂಘ ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಹೆಮ್ಮೆಯ ವಿದ್ಯಾ ಸಂಸ್ಥೆಯಾಗಿದೆ. ಇದರಿಂದ ಇಂದು  ಗೌರವ ಸನ್ಮಾನಕ್ಕೆ ಆಭಾರಿಯಾಗಿದ್ದೇನೆ.
ಇತರ ಸಮುದಾಯಗಳಿಗೆ ನೆರಳನ್ನು ನೀಡುವಂತ ಕಾರ್ಯ ವೀರಶೈವ ಸಮುದಾಯ ಹೊಂದಿದೆ.
ಯಡಿಯೂರಪ್ಪನವರನ್ನು ಸಮುದಾಯ ಬೆಂಬಲುಸಿದ್ದನ್ನು ಮರೆಯಲಾರೆ. ನಮ್ಮ ಸಮಾಜಕ್ಕೆ ದೊಡ್ಡ ಶಕ್ತಿ. ನಿಮ್ಮ ನೋವು ನಲಿವುಗಳಿಗೆ ನಾನು ಸದಾ ಸಿದ್ದ, ಅದು ನನ್ನ ಜವಾಬ್ದಾರಿಯಾಗಿದೆ. ನಿಮ್ಮ ಶಕ್ತಿ ನಮಗೆ ಬೇಕು ಮೊದಲ ಶಕ್ತಿ ಬಳ್ಳಾರಿಯಿಂದ ಬರಲಿ ಎಂದರು.
ಬಳ್ಳಾರಿಯ ಮನೆ ಮಗನಾಗಿ ಇರುವ ನಮಗೆ ಮತ್ತು  ಶ್ರೀರಾಮುಲು ಅವರಗೆ ನಿಮ್ಮ ಆಶೀರ್ವಾದ ಇರಲಿ ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಸಚಿವ ಆನಂದ್ ಸಿಂಗ್, ಶಾಸಕ ನೇಮಿರಾಜ ನಾಯಕ್,  ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮುಖಂಡರುಗಳಾದ ಲಕ್ಷ್ಮೀಅರುಣಾ ಗೋನಾಲಕ್ ರಾಜಶೇಖರ ಗೌಡ ಮೊದಕಾದವರು ಇದ್ದರು.