ವೀ.ವಿ‌ಸಂಘದ ಶಾಲಾ ಕಾಲೇಜುಗಳ ಅಧ್ಯಕ್ಷರ ಆಯ್ಕೆ ಆರ್ ವೈಎಂಸಿಗೆ ಜಾನೆಕುಂಟೆ ಪಿಡಿಐಟಿಗೆ ಬಾದಾಮಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,14- ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ 40 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಆಡಳಿತಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಿದೆ
ಸಂಘದ ಪ್ರತಿಷ್ಠಿತ ಇಂಜಿನೀಯರಿಂಗ್ ಕಾಲೇಜುಗಳಾದ ವೈ.ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜನ್ನು ಸಂಘದ ಉಪಾಧ್ಯಕ್ಷರೂ ಆಗಿರುವ ಜಾನೆಕುಂಟೆ ಬಸವರಾಜ್ ಅವರಿಗೆ ನೀಡಿದ್ದರೆ. ಹೊಸಪೇಟೆಯ ಪ್ರೌಡದೇವರಾಯ ಇಂಜಿನೀಯರಿಂಗ್ ಕಾಲೇಜ ಮತ್ತು ಬಾಬು ಲಾಲ್ ನಾಹರ್ ಬಿ.ಇಡಿ ಕಾಲೇಜ ನ್ನು ಯುವಕವೃಂದ ತಂಡದಿಂದ ಅಸಯ್ಕೆಯಾಗಿದ್ದ ಬಾದಾಮಿ ಕರಿಬಸವರಾಜ್ ಅವರಿಗೆ ನೀಡಿದೆ.
ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ನ್ನು ಏಳುಬೆಂಚಿ ರಾಜಶೇಖರ, ವೀರಶೈವ ಕಾಲೇಜ್ ನ್ನು ದರೂರು ಶಾಂತನಗೌಡ, ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜ್ ನ್ನು ಕಾತ್ಯಾಯಿನಿ ಮರಿದೇವಯ್ಯ, ವುಂಕಿ ಸಣ್ಣ ರುದ್ರಪ್ಪ ಲಾ ಕಾಲೇಜ್ ನ್ನು ಟಿ.ನರೇಂದ್ರ ಬಾಬು, ಕೊಟ್ಟೂರು ಸ್ವಾಮಿ ಬಿ.ಇಡಿ ಕಾಲೇಜ್ ನ್ನು ಹಚ್ಚೊಳ್ಳಿ ಶರಣನಗೌಡ, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜ್ ನ್ನು ಪಾಲ್ಲೇದ್ ಪ್ರಭು, ತೊಗರಿ ವೀರಮಲ್ಲಪ್ಪ ಔಷಧಿಯ ವಿಜ್ಞಾನ ಕಾಲೇಜು ನ್ನು ಎಲ್.ಟಿ.ಶೇಖರ್, ಹೊಸಪೇಟೆಯ ವಿಜಯನಗರ ಕಾಲೇಜ್ ನ್ನು ಮೆಟ್ರಿ ಮಲ್ಲಿಕಾರ್ಜುನ್, ಹಡಗಲಿಯ ಜಿ.ಬಿ.ಆರ್. ಕಾಲೇಜ್ ನ್ನು ಹೊರಕನಳ್ಳಿಯ ಮೋಹನ್ ರೆಡ್ಡಿ ಅವರಿಗೆ ನೀಡಲಾಗಿದ್ದು, ಉಳಿದ ಶಾಲಾ -ಕಾಲೇಜುಗಳನ್ನು ಸದ್ಯಕ್ಕೆ ಅಧ್ಯಕ್ಷ ಗುರುಬಸವರಾಜ್ ಅವರಿಗೆ ವಹಿಸಲಾಗಿದ್ದು ಮುಂದಿನ ದಿನಗಳಲ್ಲಿ ಇತರ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನೀಡುವ ಚಿಂತನೆ ಇದೆಯಂತೆ.