ವೀರ ಸಾವರ್ಕರ್ ಬ್ರಿಟಿಷರ ವಿರೋಧಿ: ಹಾಸಿಂಪೀರ ವಾಲಿಕಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.30: ವೀರ ಸಾವರ್ಕರ್ ಬ್ರಿಟಿಷರ ಕಡು ವಿರೋಧಿಯಾಗಿದ್ದರು. ಅಪ್ರತಿಮ ದೇಶ ಭಕ್ತ, ಕ್ರಾಂತಿಕಾರಿ, ಶ್ರೇಷ್ಠ ಚಿಂತಕ, ಕವಿ, ಲೇಖಕ, ದೂರದೃಷ್ಟಿ, ಸಾಮಾಜಿಕ ಹಾಗೂ ರಾಜಕೀಯ ನೇತಾರರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಗರದ ಚಿಂತಕರ ಚಾವಡಿ ವತಿಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ 141 ನೇ ಜಯಂತಿ ನಿಮಿತ್ತ “ವೀರ ಸಾವರ್ಕರ ವಾದಗಳ ಸೆರೆ ಬಡಿಸಿ ” ಎಂಬ ಪುಸ್ತಕವನ್ನು ಸ್ವೀಕರಿಸಿ ಮಾತನಾಡಿದರು.
ಹಿಂದು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಹಿಂದು-ಮುಸ್ಲಿಮರು ಸಿಂಧ ಪ್ರಾಂತದಲ್ಲಿ ಸ್ಥಳೀಯ ಸರ್ಕಾರ ಸ್ಥಾಪಿಸಿ ಮಾದರಿಯ ಆಡಳಿತ ನೀಡಿದ್ದು ಮಾದರಿಯಾಗಿದೆ. ದೇಶಕ್ಕಾಗಿ 50 ವರ್ಷ ಖೈದಿಯಾಗಿ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ ಹೋರಾಟ ಅಲ್ಲಗಳೆಯುವಂತಿಲ್ಲ. ನೀರು, ಅನ್ನ, ಔಷಧ ತ್ಯಜಿಸಿ ಪ್ರಾಣ ನೀಡಿದರು. ಅನೇಕ ಪ್ರಕರಣಗಳಲ್ಲಿ ಬ್ರಿಟಿಷ ಸರ್ಕಾರ ಹಾಗೂ ಭಾರತ ಸರ್ಕಾರ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದವು ಎಂದರು.
ಮಂಥನ ಸದಸ್ಯರಾದ ರಘೋತ್ತಮ ಅರ್ಜುಣಗಿ ಮಾತನಾಡಿ, ಬ್ರಿಟಿಷ ಸರ್ಕಾರ ವಿನಾ ಕಾರಣ ವೀರ ಸಾವರ್ಕರ ಮೇಲೆ ಆರೋಪಿಸಿ ಬಂಧಿಸಿತ್ತು. ಪುನರ್À ಪರಿಶೀಲಿಸಬೇಕು ಎಂಬ ಅವರ ಮನವಿ ಬ್ರಿಟಿಷರು ತಿರಸ್ಕರಿಸಿದ್ಧರಿಂದ 50 ವರ್ಷ ಕಠಿಣ ಸೆರೆ ಶಿಕ್ಷೆ ಅನುಭವಿಸಿದರು ಎಂದರು.
ಚನ್ನಬಸು ಕೋರಿ, ಬಸವರಾಜ ದಂಡೋತಿ, ಮನೀμÁ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.