ಹುಮನಾಬಾದ್:ಮೇ.29: ತಮ್ಮ ಇಡೀ ಜೀವನ ರಾಷ್ಟ್ರಕ್ಕಾಗಿ ಅರ್ಪಿಸಿದ ಸಾವರ್ಕರ್ ಅವರು ಹಿಂದೂ ರಾಷ್ಟ್ರ ಅಖಂಡ ಭಾರತದ ಪ್ರಬಲ ಪ್ರತಿಪಾದಕರಾಗಿದ್ದರು ಎಂದು ಶಾಸಕರಾದ ಡಾ. ಸಿದ್ದಲಿಂಗಪ್ಪಾ (ಸಿದ್ದು) ಪಾಟೀಲ ತಿಳಿಸಿದರು.
ಅವರು ಭಾನುವಾರ ಶಾಸಕರ ಗೃಹ ಕಚೇರಿಯಲ್ಲಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಹಿಂದೂ ಧರ್ಮದಲ್ಲೂ ಬದಲಾವಣೆಗೆ ಪ್ರೇರಣೆಯಾಗಿ ಪ್ರಬಲ ಹಿಂದೂ ರಾಷ್ಟ್ರ ಕಟ್ಟುವ ದೂರದೃಷ್ಟಿಯ ವಿಚಾರವಾದಿ ಹೊಂದಿದ ಮಹಾನ್ ಚೇತನ ಕೋಟ್ಯಂತರ ಭಾರತೀಯ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದವರು ವೀರ ಸಾವರ್ಕರ್ ಅವರು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ನಾರಾಯನ ರಾಂಪುರೆ, ಜ್ಞಾನದೇವ ಧೂಮಾಳೆ, ಸುನೀಲ ಪತ್ರಿ, ಶ್ರೀನಾಥ ದೇವಣಿ, ಕಿರಣ ಭೋವಿ, ವಿಜಯ ಪಾಟೀಲ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.