ವೀರ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಜಯಂತಿ ಉತ್ಸವ

ಬೀದರ :ಎ.8:ನಗರ ಪ್ರಸಾದ ನಿಲಯದಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಜಯಂತಿ ಉತ್ಸವ ಜರುಗಿತು.

ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಲೀಲಾವತಿ ಚಾಕೋತೆಯವರು ಉದ್ಘಾಟಕರಾಗಿ ಆಗಮಿಸಿ ಬಸವ ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡುತ್ತ ಜಗತ್ತಿನ ಇತಿಹಾಸದಲ್ಲಿಯೇ ಅಕ್ಕಮಹಾದೇವಿಯವರ ಆಧ್ಯಾತ್ಮಿಕ ಮಹಾಶಕ್ತಿ ಮೇರು ವ್ಯಕ್ತಿತ್ವ ಹೊಂದಿದ್ದು, ಸ್ತ್ರೀ ಕುಲದ ಸ್ವಾತಂತ್ರಕ್ಕಾಗಿ ಸಂಘರ್ಷ ಮಾಡಿರುವ ಆದರ್ಶ ಶರಣೆಯಾಗಿದ್ದರು.

ಚಿಕ್ಕಂದಿನಲ್ಲಿಯೇ ತನ್ನ ಆರಾಧ್ಯ ದೇವರಾದ ಚನ್ನಮಲ್ಲಿಕಾರ್ಜುನನೆ ದೇವರೆಂದು ಆರಾಧನೆ ಮಾಡುತ್ತಿದ್ದರು. ಬದುಕಿನ ತುಂಬಾ ಕಷ್ಟ ಕಾರ್ಪಣ್ಯಗಳು ಬಂದರು ತಮ್ಮ ಆತ್ಮ ಶಕ್ತಿಯ ಚೈತನ್ಯದಿಂದ ಎದುರಿಸುತ್ತಿದ್ದರು. ಒಳ-ಹೊರಗು ಸತ್ಯ ಶೋಧಕ ಚೈತನ್ಯ ಶಕ್ತಿ ಅವರಲ್ಲಿತ್ತು. ಅವರ ತಂದೆ ತಾಯಿಯವರ ಉತ್ತಮ ಸಂಸ್ಕøತಿ ಸಂಸ್ಕಾರದಿಂದ ಅವರು ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಿದ್ದಾರೆ. ಅವರು ರಚಿಸಿರುವ ವಚನಗಳು ಸಮಾಜದ ಓರೆ-ಕೋರೆಗಳನ್ನು ತಿದ್ದುವಂತಾಗಿದ್ದು ಮತ್ತು ವಚನಗಳಲ್ಲಿ ಆದ್ಯಾತ್ಮಿಕ ಮತ್ತು ಮಾನವೀಯ ಮೌಲ್ಯಗಳು ಅಡಗಿವೆ ಎಂದು ನುಡಿದರು.

ಕನ್ನಡ ಉಪನ್ಯಾಸಕರಾದ ಡಾ. ಜಗದೇವಿ ತಿಪ್ಪಶೆಟ್ಟಿಯವರು ಆದರ್ಶ ಶರಣೆ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ಕುರಿತು ಅನುಭಾವ ನುಡಿ ಮಂಡಿಸುತ್ತಾ ತಾಯಿ ಲಿಂಗಮ್ಮನವರು ಅಕ್ಕಳನ್ನು ಲಿಂಗಭಕ್ತಿ ಆಧಾತ್ಮಿಕ ಶಕ್ತಿ ನೋಡಿ ಕೌಶಿಕ ರಾಜನು ಅಕ್ಕನ್ನು ಮದುವೆಯಾಗುತ್ತೇನೆಂದರೂ ಅದಕ್ಕೆ ಸಮ್ಮತಿ ಕೊಡಲಾರದೆ ಅಕ್ಕಮಹಾದೇವಿಯವರನ್ನು ಆಧಾತ್ಮಿಕ ಶಕ್ತಿ ಒಲುಮಿಗೆ ಸದಾ ಬೆಂಗಾವಲಾಗಿ ಇರುತ್ತಿದ್ದರು. ಮುಂದುವರೆದು ಮಾತನಾಡುತ್ತ ಕೌಶಿಕ ರಾಜನು ಅಕ್ಕನ ಮೂರು ಕರಾರುಗಳಾದ ಲಿಂಗ ಪೂಜೆ, ಗುರುಪೂಜೆ ಮತ್ತು ಜಂಗಮ ಸೇವೆಗೆ ಅಡ್ಡಿ ಬಂದಿರುತ್ತಾನೆ. ಆಗ ಅಕ್ಕ ಕೌಶಿಕನಿಗೆ ಛೀ ಮಾರಿ ಹಾಕಿ ಕಲ್ಯಾಣದೆಡೆಗೆ ಆಧ್ಯಾತ್ಮಿಕದ ಪಥಕ್ಕಾಗಿ ಮುಂದೆ ಸಾಗುತ್ತಾಳೆ. ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಅಕ್ಕನ ಸಂವಾದದಲ್ಲಿ ವಿವಿಧ ರೀತಿಯ ಪರೀಕ್ಷೆಗಳು ಬಂದಿರುತ್ತವೆ. ಕೊನೆಗೆ ದೇವರನ್ನು ಗಂಡನನ್ನಾಗಿ ಮಾಡಿಕೊಂಡು ಯೋಗಾಂಗ ತ್ರಿವಿಧಿಯಾಗಿ ಅಂತರಂಗದ ಸೌಂದರ್ಯವೇ ಶ್ರೇಷ್ಠವಾದುದು ಎಂದು ತಮ್ಮ ವಚನದಲ್ಲಿ ತಿಳಿಸಿರುತ್ತಾರೆ. ಅಕ್ಕ ಮನುಕುಲಕ್ಕೆ ಅನಘ್ರ್ಯ ರತ್ನರಾಗಿದ್ದಾರೆ. ಅವರ ವಚನಗಳು ಇಂದು, ಮುಂದು ಕೂಡ ಸಮಾಜಕ್ಕೆ ಪ್ರಸ್ತುತವಾಗಿವೆ. ಅವರೊಬ್ಬರು ಆದರ್ಶ ಶರಣೆಯಾಗಿದ್ದಾರೆ ಎಂದು ವಿಷಯ ಪ್ರತಿಪಾದಿಸಿದರು.

ಮುಖ್ಯ ಅತಿಥಿಗಳಾದ ಡಾ|| ಜಯಶ್ರೀ ಬಸೆಟ್ಟಿಯವರು ಅಕ್ಕನ ವಚನಗಳನ್ನು ಪಾರಾಯಣ ಮಾಡಿದರು. ಪ್ರವಚನಕಾರರಾದ ಸುವರ್ಣಾ ಚಿಮಕೋಡೆಯವರು ಮುಖ್ಯ ಅತಿಥಿಗಳ ಸ್ವರೂಪದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ವಿದ್ಯಾರ್ಥಿನಿ ದೀಪಿಕಾ ಅಕ್ಕಮಹಾದೇವಿಯವರ ಕುರಿತು ಮಾತನಾಡಿದರು. ಭಾರತೀಯ ಬಸವ ಬಳಗದ ಅಧ್ಯಕ್ಷರಾದ ಶಂಕುಂತಲಾ ಬೆಲ್ದಾಳೆಯವರು ಅಧ್ಯಕ್ಷತೆವಹಿಸಿ ಬಸವ ಗುರುವಿನ, ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಪೂಜ್ಯ ಡಾ|| ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿದರು.

ವೇದಿಕೆ ಮೇಲೆ ಪ್ರೊ. ಉಮಾಕಾಂತ ಕೆ. ಮೀಸೆಯವರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಹಿಳಾ ಸಂಸ್ಕøತಿ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಪಾಟೀಲರವರು ಪ್ರಾಸ್ತಾವಿಕ ಮಾತನಾಡಿದರು. ಅದೇ ರೀತಿಯಾಗಿ ಅಕ್ಕನ ಬಳಗದ ವತಿಯಿಂದ ಅಕ್ಕಮಹಾದೇವಿಯವರ ತೊಟ್ಟಿಲು ಕಾರ್ಯಕ್ರಮ ಜರುಗಿತು. ಮಹಾನಾಂದ ಸ್ವಾಮಿ, ಸ್ವಾಗತ ಕೋರಿದರೆ, ವಿಜಯಲಕ್ಷ್ಮಿ ಹುಗ್ಗೆಳಿ ನಿರೂಪಿಸಿದರು. ಲಕ್ಷ್ಮಿ ಜಿ. ಬಿರಾದಾರ ವಂದಿಸಿದರು. ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ಶರಣಪ್ಪ ಚಿಮಕೋಡೆ, ಶ್ರೀಕಾಂತ ಸ್ವಾಮಿ, ಲಕ್ಷ್ಮಿಬಾಯಿ ಮಾಳಗೆ, ಕಸ್ತೂರಿಬಾಯಿ ಬಿರಾದಾರ, ಶಕುಂತಲಾ ಮಲಪನೋರ, ಶಕುಂತಲಾ ಖಂಡ್ರೆ, ಭಾಗಿರಥಿ ಕೊಂಡಾ, ಮಹಾದೇವಿ ಬಿರಾದಾರ, ಶ್ರೀದೇವಿ ಗಂಧಿಗುಡಿ, ಸವಿತಾ ಗಂಧಿಗುಡಿ, ವೈಜಿನಾಥ ಬಿರಾದಾರ ಮುಂತಾದವರು ಭಾಗವಹಿಸಿದರು.