
ಬೀದರ್: ಮಾ.9:ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ವೀರ ವನಿತೆಯರ ಸಾಹಸ ತ್ಯಾಗ ಹಾಗೂ ಬಲಿದಾನ ಮರೆಯಲಾಗದು’ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್ ಹೇಳಿದರು.
ನಗರದ ಜಿಲ್ಲಾ ಪೆÇಲೀಸ್ ಮುಖ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮಹಿಳೆಯರು ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ನನ್ನ ತಾಯಿ, ತಂದೆ ಇಬ್ಬರೂ ಉಪನ್ಯಾಸಕರು. ತಾಯಿ ಬೆಳಿಗ್ಗೆ ನನಗಾಗಿ ಉಪಾಹಾರ ಸಿದ್ಧಪಡಿಸಿ ನಂತರ ಕಾಲೇಜಿಗೆ ಹೋಗುತ್ತಿದ್ದರು. ನನ್ನ ಆರೋಗ್ಯದ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದರು. ನಾವು ಎತ್ತರಕ್ಕೆ ಬೆಳೆಯುವಲ್ಲಿ ತಾಯಿ, ತಂದೆಯ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಮಹಿಳೆಯರು ಆತ್ಮಸ್ಥೈರ್ಯದಿಂದ ಪೆÇಲೀಸ್ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ’ ಎಂದರು.
‘ನಮ್ಮ ದೇಶದಲ್ಲಿ ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಇರಲಿಲ್ಲ. ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ಕೊಟ್ಟರೂ ಅಧಿಕಾರ ಕೊಟ್ಟಿರಲಿಲ್ಲ. ಕಾಲಾಂತರದಲ್ಲಿ ಹೋರಾಟದ ಫಲವಾಗಿ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ’ ಎಂದು ನುಡಿದರು.
’12ನೇ ಶತಮಾನದಲ್ಲಿ ಮಹಿಳೆಯರಿಗೆ ವೈಚಾರಿಕ ವಿಚಾರಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಯಿತು. ಹಲವು ಕಾರಣಗಳಿಂದಾಗಿ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ದೊರಕಿರಲಿಲ್ಲ. ಇಂದು ಮಹಿಳೆ ಸಂವಿಧಾನದ ಮೂಲಕ ಎಲ್ಲ ಹಕ್ಕು ಹಾಗೂ ಸ್ವಾತಂತ್ರ್ಯ ಪಡೆದಿದ್ದಾಳೆ’ ಎಂದರು.
ನ್ಯೂಟೌನ್ ಠಾಣೆಯ ಪಿಎಸ್‍ಐ ಯಶೋಧಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ಉತ್ತಮ ಸಂಸ್ಕಾರ ಹಾಗೂ ಸಂಸ್ಕøತಿಯನ್ನು ಹೊಂದಿದ ದೇಶದಲ್ಲಿ ಇಂದು ಮಹಿಳೆಯರಿಗೆ ಸಾಧನೆ ಮಾಡಲು ವಿಪುಲ ಅವಕಾಶಗಳು ಇವೆ. ಮಹಿಳೆಯರು ಸಾಧನೆ ಮಾಡುವ ಇಚ್ಛಾಶಕ್ತಿ ಹೊಂದಬೇಕು’ ಎಂದರು.
‘ಚಲನಚಿತ್ರಗಳಲ್ಲಿ ಬರುವ ಮೂರು ತಾಸಿನ ಹಿರೊಗಳಿಗಿಂತಲೂ ಸಮಾಜದ ಹಿರೊ ಆಗಲು ಪ್ರಯತ್ನಿಸಬೇಕಿದೆ. ನಮ್ಮ ದೇಶದಲ್ಲಿ ಅನೇಕ ಜನ ಸಾಧಕಿಯರು ಆಗಿ ಹೋಗಿದ್ದಾರೆ. ಅವರ ಬದುಕು ನಮಗೆಲ್ಲ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.
‘ನನ್ನ ಅಜ್ಜಿ ಹಾಗೂ ತಾಯಿಯ ಪ್ರೇರಣೆಯಿಂದಾಗಿ ನಾನು ಕ್ರೀಡಾಪಟು ಹಾಗೂ ಕವಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಪರಿಶ್ರಮದ ಫಲವಾಗಿಯೇ ಇಂದು ಪೆÇಲೀಸ್ ಅಧಿಕಾರಿಯೂ ಆಗಿದ್ದೇನೆ. ನೀವು ಹೆಣ್ಣು ಮಕ್ಕಳಲ್ಲ; ಹೆಣ್ಣು ಹುಲಿಗಳು ಎಂದು ಅಜ್ಜಿ ಹುರಿದುಂಬಿಸುತ್ತಿದ್ದರು. ಅವರು ಶಿಜಾಜಿಯ ತಾಯಿ ಜೀಜಾಬಾಯಿ ಅವರಂತೆ ಪ್ರೇರೇಪಿಸಿದ್ದರಿಂದ ಇಂದು ಸಾಧನೆ ಮಾಡಲು ಸಾಧ್ಯವಾಯಿತು’ ಎಂದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಶಾಖಾ ಅಧೀಕ್ಷಕಿ ಕಾವೇರಿ, ಪಿಎಸ್‍ಐಗಳಾದ ಗಂಗಮ್ಮ, ಮಲ್ಲಮ್ಮ, ರೂಪಾ ಕ್ಯಾಥರಿನ್, ಜಿಲ್ಲೆಯ ಮಹಿಳಾ ಅಧಿಕಾರಿಗಳು ಇದ್ದರು. ಮಹಿಳಾ ಪೆÇಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.