ವೀರ ಬ್ರಹ್ಮೇಂದ್ರಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ

ಕೋಲಾರ,ಜು.೭- ತಾಲೂಕಿನ ಸುಗಟೂರು ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಗುಟೂರು ಹೋಬಳಿ ಸವಿತಾ ಸಮಾಜ ಕಲಾವಿದರ ಸಂಘದ ಸಹಯೋಗದಲ್ಲಿ ಗುರುಪೂರ್ಣಿಮೆ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ಎಮ್. ಮಂಜುನಾಥ್ ಮತ್ತು ತಂಡದವರಿಂದ ನಾದಸ್ವರ. ಡೋಲು ಮತ್ತು ಭಜನೆ ಕ್ರಾಯ೯ಕ್ರಮವನ್ನು ಸತತವಾಗಿ ೨೪ ಗಂಟೆಗಳ ಕಾಲ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಸೇವಾ ಸಮಿತಿಯ ಗ್ರಾಮಸ್ಥರು, ಅಂತರರಾಷ್ಟ್ರೀಯ ಕಲಾವಿದ ಗೋ.ನಾ.ಸ್ವಾಮಿ, ಎಸ್.ಎನ್.ಗೋಪಾಲಗೌಡ್ರು, ಎಸ್ ಕೆ.ಸಾದೇಗೌಡ, ಕೋಲಾರ ಜಿಲ್ಲಾ ಸವಿತಾ ಸಮಾಜದ ಹಿರಿಯರಾದ ಎಸ್.ಮಂಜುನಾಥ್, ಎನ್.ಚಂದ್ರಪ್ಪ, ಎನ್.ನಾಗರಾಜ್, ಎ.ಎಸ್.ಶ್ರೀನಿವಾಸ್, ಎಂ.ವೆಂಕಟಾಚಲ, ಎನ್.ವೆಂಕಟಸ್ವಾಮಿ, ಹನುಮಂತಪ್ಪ, ಶ್ರೀನಾಥ್, ಮೀಸೆ ವೆಂಕಟೇಶಪ್ಪ ಉಪಸ್ಥಿತರಿದ್ದರು.