ವೀರ ಕನ್ನಡಿಗರ ಸೇನೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ,ಡಿ.1- ಕನ್ನಡ ನಾಡು ನುಡಿ, ನೆಲಜಲ ಮತ್ತು ಸಂಸ್ಕøತಿಯ ರಕ್ಷಣೆಗಾಗಿ ಕನ್ನಡಪರ ಸಂಘಟನೆಗಳು ಕಾವಲು ಸೈನಿಕರಂತೆ ಕೆಲಸ ಮಾಡುತ್ತಿರುವು ತುಂಬ ಸಂತಸದ ವಿಷಯ ಎಂದು ಚಲನಚಿತ್ರ ನಟಿ ರಿತನ್ಯ ಹೂವಣ್ಣ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ವೀರ ಕನ್ನಡಿಗರ ಸೇನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನ ಕಲೆ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಂಘಟನೆಗಳ ಪ್ರೋತ್ಸಹದ ಅಗತ್ಯವಿದೆ ಆ ನಿಟ್ಟಿನಲ್ಲಿ ವೀಕಸೇ ಕೆಲಸ ಮಾಡುತ್ತಿರುವುದು ಹೆಮ್ಮಯ ಸಂಗತಿ ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ಪಾಳಾದ ಪೂಜ್ಯ ಗುರುಮೂರ್ತಿ ಶಿವಾಚಾರ್ಯರು, ಕವಲಗಾದ ಅವದೂತ ಶರಣ ನಾಗಲಿಂಗ ಮುತ್ಯಾ, ಮಂಗಲಗಿಯ ಡಾ.ಶಾಂತಸೋಮನಾಥ ಶಿವಚಾರ್ಯರು, ದಂಡಗುಂಡದ ಪೂಜ್ಯ ಸಂಗಮನಾಥ ಶಿವಚಾರ್ಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಾಲರಾಜ ಗುತ್ತೇದಾರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ವಿಶಾಲ ನವರಂಗ, ಡಾ.ವಿಶ್ವನಾಥ ಜಿಪಿ, ಚಿತ್ರ ನಿರ್ದೆಶಕ ಜಗದೀಶ, ಶಶೀಲ ನಮೋಶಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ, ಶರಣು ಗದ್ದುಗೆ, ಖೈಯುಮ್ ಸರ್, ಡಾ.ಅರ್.ಜಿ.ದೇವಣಿ, ಶರಣಕುಮಾರ ಬೇಲೂರ, ವಿನಾಯಕ ಹರೇಕರ, ಸುರೇಶ ಹಾದಿಮನಿ, ಡಾ.ವಿನೋದಕುಮಾರ, ಪ್ರಭು ಹಾದಿಮನಿ, ವಿಶಾಲ ದರ್ಗಿ, ಹಮೀದ ಭಾಯಿ, ಸುರೇಶ ಬಡಿಗೇರ, ಜ್ಯೋತಿ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ವೀರ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ವಹಿಸಿದ್ದರು. ಸಾಹಿತಿ ಸುಬ್ಬಣ್ಣ, ಅಮರ ಪೂಜಾರಿ, ವಿಠಲ ಕುಸಾಳೆ, ನಾಗಯ್ಯಸ್ವಾಮಿ, ಜಗನ್ನಾಥ ಪಟ್ಟಣಶೆಟ್ಟಿ, ರಮೇಶ ಪಾಸ್ವಾನ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಾಧಕರಾದ ಅಧಿನಾಥ ಹೀರಾ, ಶಿವಶರಣಪ್ಪ ಮುದ್ದಿವಂತ, ಬಿಬಿ ನಾಯಕ, ಅಪ್ಪಾಸಾಹೇಬ ತಿರ್ದೇ, ವೈಜನಾಥ ತಡಕಲ್, ಸುಭಾಸ ರಾಠೋಡ, ಶಿವಶರಣಪ್ಪ ಮೂಲಗೆ, ಎಂ.ಎ.ಮಠಪತಿ ಸೇರಿದಂತೆ ಹಲವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.