ವೀರ ಒನಕೆ ಓಬವ್ವ ಪ್ರತಿಮೆಗೆ ಅವಮಾನ: ಕಿಡಿಗೇಡಿಗಳ ಬಂಧನಕ್ಕೆ ಛಲುವಾದಿ ಮಹಾಸಭಾ ಆಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ12: ಚಿತ್ರದುರ್ಗದಲ್ಲಿ ವೀರ ವನಿತೆ ಓನಕೆ ಓಬವ್ವ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೆ ಪತ್ತಹಚ್ಚಿ ಬಂಧಿಸಿ ಗಡಿಪಾರು ಮಾಡುವಂತೆ ಛಲವಾದಿ ಮಹಾಸಭಾ ಹೊಸಪೇಟೆ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಪದಾಧಿಕಾರಿಗಳು ವೀರವನಿತೆ ಓನಕೆ ಓಬವ್ವ ಪ್ರತಿಮೆಗೆ ರಾತ್ರೋರಾತ್ರಿ ಅವಮಾನ ಮಾಡಿದ್ದು ರಾಜ್ಯದ್ರೋಹಿ ಪ್ರಕರಣ ದಾಖಲಿಸಿ ಕೂಡಲೇ ಪತ್ತೆಹಚ್ಚಿ ಉಗ್ರಶಿಕ್ಷೆಗೆ ಒಳಪಡಿಸಬೇಕು,
ಸುಮಾರು 450 ವರ್ಷಗಳ ಇತಿಹಾಸ ವಿರುವ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವಗಳು ಚಿತ್ರದುರ್ಗ ಕೋಟೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಲಕ್ಕಿಸದೆ ರಕ್ಷಣೆ ಮಾಡಿ ಆದರ್ಶ ಮಹಿಳೆಯಾಗಿ ಮಾದರಿಯಾಗಿದ್ದು ಇಂತಹ ಓಬವ್ವಳಿಗೆ ಅವಮಾನ ಮಾಡಿದ್ದು ನಾಚಿಗೇಡಿನ ಸಂಗತಿಹಾಗಿದ್ದು ರಾಜ್ಯ ಸರ್ಕಾರವೂ ಆದಷ್ಟುಬೇಗ ಕಿಡಿಗೇಡಿಗಳನ್ನು ಬಂದಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು, ಸರ್ಕಾರ ಈ ಕ್ರಮದಲ್ಲಿ ವಿಳಂಬ ನೀತಿ ಅನುಸರಿಸಿದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿಯೂ ಛಲುವಾದಿ ಮಹಾಸಭಾ ನೀಡಿದ ಮನವಿಯಲ್ಲಿ ಎಚ್ಚರಿಸಿದೆ.
ಮಹಾಸಭಾದ ತಾಲೂಕು ಅಧ್ಯಕ್ಷ ರಮೇಶ್ ಛಲವಾದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮುನಿಯಪ್ಪ ಗೋವಿಂದ, ರಾಜ್ ರಾಮಾಲಿ, ರಾಜ, ಅಂಬರೀಶ್, ಪ್ರಕಾಶ, ನೀಲಕಂಠ, ಮೋಲಪ್ಪ, ರವಿ, ರಾಮು, ಮಲ್ಲೇಶ, ಜಾಕಿರ್ ಇತರರು ಪಾಲ್ಗೊಂಡಿದ್ದರು.