ವೀರೇಶ್ ಮಲ್ಲಾಬಾದಿಗೆ ಶ್ರೀ ಪಂಡಿತ ಪಂಚಾಕ್ಷರಿ ಗವಾಯಿಗಳವರ ಪ್ರಶಸ್ತಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.30; ಅಶ್ವಿನಿ ಪ್ರಕಾಶನದ 2ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗದಗ  ವೀರಶೈವ ಪುಣ್ಯಶ್ರಮದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿರುವ  ಸಮಾರಂಭದಲ್ಲಿ ದಾವಣಗೆರೆ ಯುವ ಪ್ರತಿಭೆ ವೀರೇಶ್ ಮಲ್ಲಾಬಾದಿ ರವರಿಗೆ ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ *ಗಾನಯೋಗಿ ಶ್ರೀ ಪಂಡಿತ ಪಂಚಾಕ್ಷರಿ ಗವಾಯಿಗಳ* ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಕಾರ್ಯಕ್ರಮದ ಆಯೋಜಕರು ಹಾಗೂ ಅಧ್ಯಕ್ಷರಾಗಿರುವಂತಹ ಶ್ರೀಮತಿ ಡಾ. ವಿ ವಿ ಹಿರೇಮಠ  ತಿಳಿಸಿದ್ದಾರೆ.