ವೀರೇಶ್ವರ ಲಿಂಗಾಯತ ಪಂಚಮಸಾಲಿ ಸಂಘದ ದಾವಣಗೆರೆ ಜಿಲ್ಲಾ ಘಟಕ ಮತ್ತು ಹರ ಸೇವಾ ಸಂಸ್ಥೆ ಹಾಗೂ ವೀರೇಶ್ವರ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸಹಯೋಗದಲ್ಲಿ ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಎಸ್ ಎಸ್ ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ  ಸಂಘದ ಪಂಚಮಸಾಲಿ ಗುರುಪೀಠದ ಶ್ರೀ‌ವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಜಿಲ್ಲಾಧ್ಯಕ್ಷ ಬಿ.ಸಿ ಉಮಾಪತಿ,  ಪ್ರಧಾನ ಕಾರ್ಯದರ್ಶಿ ಎಸ್ ಸಿ ಕಾಶಿನಾಥ್,ಸಮಾಜದ ಉಪಾಧ್ಯಕ್ಷ ಎಂ.ದೊಡ್ಡಪ್ಪ ಎಸ್.ಮಲ್ಲಿನಾಥ್ ,ಹೆಚ್.ಎಂ ನಾಗರಾಜ್, ಲಿಂಗರಾಜ್ ಉಪಸ್ಥಿತರಿದ್ದರು.