ವೀರೇಂದ್ರ ಹೆಗಡೆಯವರ ಸಮಾಜ ಮುಖಿ ಕಾರ್ಯ ದೇಶಕ್ಕೆ ಮಾದರಿ 

 ಹಿರಿಯೂರು.ಜು.21-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಈಶ್ವರಗೆರೆ ವಲಯದ ಬಿದರಿಕೆರೆ ಕಾರ್ಯಕ್ಷೇತ್ರದ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ  ಪೂಜ್ಯರು ಮಂಜೂರು ಮಾಡಿದ  100000 ಡಿ ಡಿ ಯನ್ನು  ಹಿರಿಯೂರು ಜಿಲ್ಲಾ ನಿರ್ದೇಶಕರಾದ ಕುಮಾರ್ ಸುವರ್ಣ  ಅವರು  ದೇವಸ್ಥಾನದ ಆಡಳಿತ ಮಂಡಳಿ ಅವರಿಗೆ ಹಸ್ತಾಂತರಿಸಿದರು. ಈ  ಸಂದರ್ಭದಲ್ಲಿ ಮಾತನಾಡಿದ  ಅವರು  ಪರಮ ಪೂಜ್ಯರ ಅನೇಕ  ಕಾರ್ಯಕ್ರಮ ಗಳಲ್ಲಿ ಈ ಕಾರ್ಯಕ್ರಮ ವು ಒಂದಾಗಿದೆ. ದೇವಸ್ಥಾನ ಗಳ  ಜೀರ್ಣೋದ್ದಾರಗಳ  ಮಾಡುವ  ಮೂಲಕ   ಸಮಾಜ  ಮುಖಿ ಕಾರ್ಯಕ್ರಮ ಮಾಡುವಲ್ಲಿ  ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು ಈ ಸಂಧರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಹರಿ ಪ್ರಸಾದ್. ವಲಯದ ಮೇಲ್ವಿಚಾರಕರು. ಒಕ್ಕೂಟ ಪದಾಧಿಕಾರಿಗಳು  ಸಂಘದ ಸದಸ್ಯರು ಹಾಗೂ ದೇವಸ್ಥಾನ ಕಮಿಟಿಯವರು ಉಪಸ್ಥಿತರಿದ್ದರು.