ವೀರುಪಾಕ್ಷಿ ಮರಕಂದಿನ್ನಿ ಪತ್ರಕರ್ತರಿಗೆ ಸನ್ಮಾನ

ಅರಕೇರಾ.ಆ.೦೧- ದೇವದುರ್ಗತಾಲ್ಲೂಕಿನ ಮರಕಂದಿನ್ನಿ ಗ್ರಾಮದ ಅರಕೇರಾ ಹೋಬಳಿಯ ಈಶ್ಯಾನ ಟೈಮ್ಸ್ ಕನ್ನಡ ದಿನಪತ್ರಿಕೆಯ ವರದಿಗಾರ ವೀರುಪಾಕ್ಷಿ ನಾಗಡದಿನ್ನಿ ಇವರಿಗೆ ೨೦೨೨-ನೇ ಸಾಲಿನ ಇವರ ಪ್ರತಿಕೋದ್ಯಮದಲ್ಲಿನ ಸೇವೆ ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ ದೇವದುರ್ಗದವತಿಯಿಂದ ತಿಪ್ಪಣ್ಣ ಬಲ್ಲಿದವ ಪ್ರಾಯೋಜಿತ ಶ್ರೀಗಂಧ ಸಿರಿ ಪ್ರಶಸ್ತಿಗೆ ಪಡೆದಿರುವದಕ್ಕೆ. ಅರಕೇರಾ ಹೋಬಳಿ ಪತ್ರಕರ್ತರು ಸೇರಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.
ಸಂದರ್ಭದಲ್ಲಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೂಗೂರೇಶ್ವರ ಎಸ್‌ಗುಡಿ, ಮಹಾಂತೇಶಸ್ವಾಮಿ ಹಿರೇಮಠ,ಗುರುಸ್ವಾಮಿ, ಅಮರೇಶನಾಯಕ ಮತ್ತು ಗ್ರಾಮದ ಯುವಕರಾದ ಕಮಾಲಿಸಾಬ,ವೀರುಪಾಕ್ಷಿಕುಂಬಾರ,ಮಹ್ಮದ ಇದ್ರೀಸ್, ಗುಲ್ಲೇಶಕುಮಾರ ಉಪಸ್ಥಿತರಿದ್ದರು.