
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ10 : ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಎಸ್ ಎಸ್ ಕೂಡ್ಲಮಠ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಎರಡು ದಿನಗಳ ಕಾಲ ನಡೆದ ಶಿಗ್ಲಿ ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದರು.
ಬಾಲಕರ ವಿಭಾಗ:- ಕುಮಾರ್ ಪಿ ಎ ನಡುವಿನಕೆರಿ 100 200ಮೀ 110ಮೀ ಓಟಗಳಲ್ಲಿ ಪ್ರಥಮ ಸ್ಥಾನ,
ಎಂ ಐ ಸಣ್ಣೋಲಿ 800 ಮೀ 1500ಮೀ 3000ಮೀ ಓಟಗಳಲ್ಲಿ ಪ್ರಥಮ ಸ್ಥಾನ, ಕುಮಾರ ಎಸ್ ಎಲ್ ಲಮಾಣಿ 400ಮೀ ಓಟ ಚಕ್ರ ಎಸೆತ ನಡಿಗೆ ಸ್ಪರ್ಧೆ ಗಳಲ್ಲಿ ಪ್ರಥಮ ಸ್ಥಾನ ಪಡೆದು ಈ ಮೂರು ಜನ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಬಿ ಆರ್ ಪಾಟೀಲ ಉದ್ದ ಜಿಗಿತ ಎತ್ತರ ಜಿಗಿತಗಳಲ್ಲಿ ಪ್ರಥಮ, ವಿ ಎಂ ಗೋದಿ ತ್ರಿವಿಧ ಜಿಗಿತದಲ್ಲಿ ಪ್ರಥಮ, ವಿ ಎಮ್ ಗೊಂದಕರ 1500 ಮೀ 3000ಮೀ ಓಟಗಳಲ್ಲಿ ದ್ವಿತೀಯ, ಪಿ ಎ ನಡುವಿನಕೆರಿ ಬಲ್ಲೆ ಎಸೆತದಲ್ಲಿ ದ್ವಿತೀಯ ಸ್ಥಾನ ,ಬಾಲಕರ ಖೋ ಖೋ ಪ್ರಥಮ, ವಾಲಿಬಾಲ್ ದ್ವಿತೀಯ.
ಬಾಲಕಿಯರ ವಿಭಾಗದ:-
ಸಿ ಸಿ ಪಾಟೀಲ್ 400ಮೀ 800ಮೀ ಓಟಗಳಲ್ಲಿ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವಿರಗರಣ ಪ್ರಶಸ್ತಿ ಪಡೆದಿದ್ದಾಳೆ.
ಎಲ್ ಎನ್ ಬಾಳಿಕಾಯಿ ಸರಪಳಿಗೊಂಡು ಎಸೆತ ಚಕ್ರ ಎಸೆತ ಗಳಲ್ಲಿ ಪ್ರಥಮ ಗುಂಡು ಎಸೆತದಲ್ಲಿ ದ್ವಿತೀಯ,
ಆರ್ ಎಸ್ ಪಲ್ಲೆದ ಗುಂಡು ಎಸೆತ ಪ್ರಥಮ ಬಲ್ಲೆ ಎಸೆತ ಪ್ರಥಮ ,
ಎಸ್‍ಎನ್ ಹುಲಗೂರ 1500ಮೀ 800ಮೀ ಓಟಗಳಲ್ಲಿ ದ್ವಿತೀಯ, ಜೆ ಎ ಸಂತ ಬಾನವರ ಎತ್ತರ ಜಿಗಿತದಲ್ಲಿ ಪ್ರಥಮ ,ಜಿ ಜಿ ಲಮಾಣಿ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ಜಿ ಏನ್ ಬೊಮ್ಮನಕಟ್ಟಿ, ಬಲ್ಲೆ ಎಸೆತದಲ್ಲಿ ದ್ವಿತೀಯ, ಎಲ್ ಬಿ ಕರಜಗಿ 3000ಮೀಟರ್ ಓಟದಲ್ಲಿ ದ್ವಿತೀಯ, ಎ ಎ ನದಾಫ್ 400 ಮೀ ಓಟದಲ್ಲಿ ದ್ವಿತೀಯ, ಬಿ ಎಚ್ ವಾಲ್ಮೀಕಿ ಎತ್ತರ ಜಿಗಿತದಲ್ಲಿ ದ್ವಿತೀಯ, ಎನ್ ಬಿ ವಡ್ಡರ 3000 ಮೀ ಓಟದಲ್ಲಿ ದ್ವಿತೀಯ, ಎ ಮೇಗಲಮನಿ ಚಕ್ರ ಎಸೆತದಲ್ಲಿ ದ್ವಿತೀಯ, ಜಿ ಎಂ ನವಲೆ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕಿಯರ ಖೋಖೋ ದ್ವಿತೀಯ,
ಈ ರೀತಿಯಾಗಿ ಸ್ಥಾನಗಳನ್ನು ಪಡೆದು ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಕ್ರೀಡಾ ತರಬೇತಿಯನ್ನು ನೀಡಿದ ದೈಹಿಕ ಶಿಕ್ಷಕರಾದ ಕೆ. ಆರ್. ಲಮಾಣಿ ಇವರಿಗೆ ಸಂಸ್ಥೆಯ ಚೇರಮನ್ನರು ಶಾಲೆಯ ಮುಖ್ಯ ಅಧ್ಯಾಪಕರು ಆಡಳಿತ ಮಂಡಳಿಯ ಸರ್ವ ಸದಸ್ಯರು ಕಾರ್ಯದರ್ಶಿಗಳು ಶಾಲಾ ಸಿಬ್ಬಂದಿ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.