ವೀರಾಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ


ಹುಬ್ಬಳ್ಳಿ,ಡಿ6: ಲಿಂಗರಾಜ ನಗರದ ಶ್ರೀ ವೀರಾಂಜನೇಯ ದೇವಸ್ಥಾನದ ಕಾರ್ತಿಕೋತ್ಸವ ಶನಿವಾರ ಅದ್ಧೂರಿಯಿಂದ ಜರುಗಿತು.
ಬೆಳಗ್ಗೆಯಿಂದಲೆ ಭಕ್ತರು ವೀರಾಂಜನೇಯ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ನೈವೇದ್ಯ ಅರ್ಪಿಸಿದರು. ವೀರಾಂಜನೇಯನಿಗೆ ನಾನಾ ಹೂವುಗಳಿಂದ ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿಯಾಗುತ್ತಿದ್ದಂತೆ ಮಕ್ಕಳು, ಮಹಿಳೆಯರು, ದೇವಸ್ಥಾನದ ಸಮಸ್ತ ಆಡಳಿತ ಮಂಡಳಿ ಹಾಗೂ ಸ್ಥಳಿಯರು ದೇವಸ್ಥಾನದ ಸುತ್ತಮುತ್ತ ದೀಪ ಬೆಳಗಿಸಿ ಸಂಭ್ರಮಿಸಿದರು. ನೂರಾರು ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದ್ದರು.
ವೀರಾಂಜನೇಯ ದೇವಸ್ಥಾನದಲ್ಲಿ ಎಲ್ಲರಿಗೂ ಪೂಜೆ ನಂತರ ವೀರಾಂಜನೇಯ ಯುವಕ ಸಂಘದ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದಂತೆ ಅನೇಕ ಪೂಜಾ ವಿಧಿವಿಧಾನಗಳನ್ನು ವೀರಾಂಜನೆಯ ದೇವಸ್ಥಾನದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ ಕೌಜಗೇರಿ, ದೇವಸ್ಥಾನದ ಸದಸ್ಯರಾದ ಎ.ವಿ ಅರಳಿ, ಎಂ.ಬಿ ಪಾಟೀಲ, ಎಸ್.ಜಿ ಗಡತಣ್ಣನವರ, ಎಂ.ವಿ ಕಡಗಾವಿ ವೀರಾಂಜನೇಯ ಯುವಕ ಸಂಘದ ಅತ್ಯಂತ ಕ್ರಿಯಾಶೀಲ ಅಧ್ಯಕ್ಷರಾದ ಎಸ್.ಸಿ ಹಿರೇಮಠ, ಉಪಾಧ್ಯಕ್ಷರಾದ ಎಂ.ವಿ ಮೊಮ್ಮನಗೌಡ್ರು, ಕಾರ್ಯದಶೀಗಳಾದ, ಬಿ.ಎಸ್ ದೇವರಮನಿ, ಹಾಗೂ ಸಂಘದ ಸದಸ್ಯರಾದ ಬಿ.ಎಸ್.ಕಪ್ಪತಣ್ಣವರ, ಎನ್.ಎಫ್ ಮುನವಳ್ಳಿ, ಬಿ.ಎಸ್ ಹೂಗಾರ, ನಾಗರಾಜ ಕೌದಿ, ಗಿರೀಶ್ ಕೌದಿ, ಷಣ್ಮುಕ ಸಿ. ಕುಮಾರಗೋರೋಪಾಳ, ಎಸ್.ಸಿ ಪಾಟೀಲ, ಹಾಗೂ ಎನ್. ಎಸ್ ಕುಬುಸದ, ಶಂಕ್ರಯ್ಯ, ಲಿಂಗರಾಜನಗರದ ಗಣ್ಯವ್ಯಕ್ತಿಗಳಾದ ಎಸ್.ಸಿ ಅಂಗಡಿ, ಜಿ.ಸಿ ಹಿರೇಮಠ, ಬಿ.ಬಿ ಶಿವಗುತ್ತಿ, ವೀರು ಉಪ್ಪಿನ ಹಾಗೂ ಇತರೆ ಸರ್ವ ಸದಸ್ಯರು ಕಾರ್ತಿಕೋತ್ಸವದಲ್ಲಿ ಭಾಗವಹಿಸಿದ್ದರು.