ವೀರಸಾವರ್ಕರ್ ಯುವಕ ಮಂಡಳಿಯಿಂದ ಗಣಹೋಮ

ಸಿರವಾರ,ಸೆ.೨೪- ಪಟ್ಟಣದ ಸಜ್ಜಲಶ್ರೀ ಆಶ್ರಮದಲ್ಲಿ ವೀರಸಾವರ್ಕರ್ ಯುವಕ ಮಂಡಳಿ ವತಿಯಿಂದ ಸ್ಥಾಪಿಸಲಾದ ಗಣೇಶ ಮಂಟಪದಲ್ಲಿ ಶನಿವಾರ ’ಗಣಹೋಮ’ ಪೂಜೆ ನೆರವೇರಿಸಲಾಯಿತು.
ಕಳೆದ ಎರಡು ಮೂರು ದಿನಗಳಿಂದ ದೀಪೋತ್ಸವ, ಹೋಮ ಹವನ, ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಲಾಗುತ್ತಿದೆ. ಶನಿವಾರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಯುವಕರ ಧಾರ್ಮಿಕ, ಆಧ್ಯಾತ್ಮಿಕ ಮನೋಭಾವ ಇಂದಿನ ದಿನಗಳಲ್ಲಿ ಸ್ಪೂರ್ತಿದಾಯಕ ಬೆಳವಣಿಗೆ, ಸಾಂಪ್ರದಾಯಿಕ ವಾಗಿ ಗಣೇಶ ಪ್ರತಿಷ್ಟಾಪನೆ ಮಾಡಿ, ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸುತ್ತಿರುವುದು ಸಂತಸ ತಂದಿದೆ ಎಂದು ಯುವ ಮುಖಂಡ ಬ್ರಜೇಶ್ ಪಾಟೀಲ ಹೇಳಿದರು.
ವೀರಸಾವರ್ಕರ್ ಯುವಕ ಮಂಡಳಿಯ ಸದಸ್ಯರು, ಹಾಗು ಇತರರು ಇದ್ದರು.