ವೀರಶೈವ ಸಮಾಜದ ಪದಾಧಿಕಾರಿಗಳ ಆಯ್ಕೆ

ಅರಕೇರಾ,ಏ.೨೬- ಸ್ಥಳಿಯ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ದೇವದುರ್ಗ ತಾಲ್ಲೂಕಾ ವೀರಶೈವ ಸಮಾಜದ ಅಧ್ಯಕ್ಷರಾದ ಡಾ. ಕಿರಣಕುಮಾರ ಅಧ್ಯಕ್ಷತೆಯಲ್ಲಿ ದೇವದುರ್ಗ ತಾಲ್ಲೂಕು ವೀರಶೈವ ಸಮಾಜದ ಸದಸ್ಯತ್ವ ನೊಂದಣಿ ಮತ್ತು ಗಣತಿ ಕುರಿತು ಸಭೆಯನ್ನು ಕರೆಯಲಾಗಿತ್ತು.
ತಾಲ್ಲೂಕಿನಲ್ಲಿ ವೀರಶೈವ ಸಮಾಜವನ್ನು ತಳಮಟ್ಟದಿಂದ ಸಮಾಝವನ್ನು ಬಲಪಡಿಸುವ ಉದ್ದೇಶದೊಂದಿಗೆ ಸಮಾಜದಲ್ಲಿನ ಪ್ರತಿಯೊಂದು ಮನೆ ಮನೆಗೆ ಹೋಗಿ ಗಣತಿದಾರರು ಮನಗೆ ಮನೆಗೆ ಬೇಟಿ ನೀಡಿದಾಗ ಅಸ್ವಯಂ ವಿವರವನ್ನು ಖಚಿತಪಡಿಸಿಕೊಂಡು ಸದಸ್ಯತ್ವಪಡೆದುಕೊಳ್ಳಬೇಕೆಂದರು. ಈಗಾಗಲೇ ಗಣತೀಯ ಕಾರ್ಯ ಈ ಯುಗಾದಿಯ ಹೊಸವರ್ಷದ ಶುಭ ಸಂದರ್ಬದಲ್ಲಿ ಗಲಗ ಗ್ರಾಮದಿಂದ ಪ್ರಾರಂಭಮಾಡಲಾಗಿದೆ ಎಂದರು. ಉಳಿದ ಗ್ರಾಮಗಳಲ್ಲಿ ಸಭೆ ನಡೆಸಿದ್ದು ಸಮಾಜದ ಬಂಧುಗಳು ಸಭೆಯಲ್ಲಿ ಭಾಗವಹಿಸುವ ಮೂಲಕ ಸಮಾಜದ ಸಂಘಟನೆ ಬಲಪಡಿಸಲು ಯುವಕರು ಸಮಾಜದ ಬಾಂದವರು ಮುಂದೆ ಬರುವಂತೆ ತಿಳಿಸಿದರು.
ಅರಕೇರಾ ಪಟ್ಟಣದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳು ಅವಿರೋಧವಾಗಿಆಯ್ಕೆ: ಗೌರವಅಧ್ಯಕ್ಷರಾಗಿ ಸುರೇಶಸಾಹುಕಾರ ಗುಡಿ ಅಧ್ಯಕ್ಷರಾಗಿ ಹೊಳೆಪ್ಪ ಕುರುಕುಂದಿ, ಉಪಾಧ್ಯಕ್ಷರು ಆದೇಪ್ಪ ಕುಂಬಾರ,ಪ್ರದಾನಕಾರ್ಯದರ್ಶಿ ಗುರುಸ್ವಾಮಿ, ಸಂಘಟನಾಕಾರ್ಯದರ್ಶಿ,ಸೂಗೂರೇಶಹೂಗಾರ, ಖಜಾಂಜಿ ಜಿ.ಬೂದೇಪ್ಪಸಹುಕಾರ ಸೇರಿದಂತೆ ಇವರುಗಳು ಅವಿರೋದವಾಗಿ ಆಯ್ಕೆಯಾದರು.
ಸಂದರ್ಬದಲ್ಲಿ ಚನ್ನವೀರಯ್ಯಸ್ವಾಮಿ ಹಿರೇಮಠ,ರಾಚಯ್ಯಸ್ವಾಮಿ ಮಠಪತಿ,ಚಂದ್ರಶೇಖರಶೆಟ್ಟಿ,ಜಿ.ಬೂದೇಪ್ಪಸಾಹುಕಾರ, ಮಲ್ಲಿಕಾರ್ಜುನಸಾಹುಕಾರ ಗುಡಿ,ಎಂಶಂಕ್ರಪ್ಪಸಾಹುಕಾರ,ನಾಗಪ್ಪಕುರುಕುಂದಿ, ಬಸವರಾಜಪ್ಪಬಂಡೆಗುಡ್ಡ, ಸುರೇಶಅಮರಪುರ,ಚಂದ್ರಶೇಖರ ಚಿಕ್ಕಬೂದೂರು.ನಿರಂಜನಬಳೆ, ಬಸವರಾಪ್ಪವಾರದ, ಬಸವರಾಜಪಾಟೀಲ್ ಅಮರಪೂರ್ ಶರಣುಖೇಣದ, ರಾಜಶೇಖರ ಅಮರಪೂರು ಬಸವರಾಜ ಕುಂಬಾರ,ಬೂದೇಪ್ಪ ಬಳೆ ಸಂಗಮೇಶ ಹರವಿ, ಶರಣಬಸವ ರಾಮದುರ್ಗ,ಸೂಗೂರೇಶ್ವರತಾಳಿಕೋಟಿ ಕೆ,ವಿರೇಶಸಾಹುಕಾರ,ಜಗದೀಶನಾಗೋಲಿ,ಅಮರೇಶಬಳಿಗೇರಾ,ಶಾಂತಾಯ್ಯಸ್ವಾಮಿ,ವೀರುಪಾಕ್ಷಯ್ಯಸ್ವಾಮಿ,ಪಂಪಣ್ಣಶೆಟ್ಟಿ ಸೇರಿದಂತೆ ವೀರಶೈವಸಮಾಜದವರು ಉಪಸ್ಥಿತರಿದ್ದರು.