ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ಆಗ್ರಹ

ಬೆಂಗಳೂರು, ಮಾ.೧೫- ಶಿವನಗರದಲ್ಲಿ ಸಿದ್ದಗಂಗಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಬಳಗ ಮತ್ತು ವಿಶ್ವ ವೀರಶೈವ ಯುವ ವೇದಿಕೆ ವತಿಯಿಂದ ಪ್ರಸ್ತುತ ಕರ್ನಾಟಕ ರಾಜ್ಯ ೨೦೨೩ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಕೊಡಬೇಕೆಂದು ಅಗ್ರಹಿಸಿ ಕ್ರಾಂತಿಯೋಗಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಭೆಗೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಜನಸಂಖ್ಯೆ ೧ ಕೋಟಿ ೫೦ ಲಕ್ಷ ಜನರು ಇದ್ದಾರೆ. ನಮ್ಮಲ್ಲಿ ಭೇದಭಾವವಿಲ್ಲ , ವೀರಶೈವ ಲಿಂಗಾಯಿತರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಆನ್ಯಾಯವಾದಾಗ ನಾವು ಸುಮ್ಮನೆ ಕೂರಲು ಬರುವುದಿಲ್ಲ. ಬೆಂಗಳೂರು ನಗರ ೨೮ ವಿಧಾನಸಭಾ ಕ್ಷೇತ್ರದಲ್ಲಿ ೨೫ ಲಕ್ಷಕ್ಕೂ ಹೆಚ್ಚು ಜನರು ವೀರಶೈವ ಲಿಂಗಾಯಿತ ವಾಸವಿದ್ದಾರೆ. ನಮ್ಮ ಸಮುದಾಯ ಟಿಕೆಟ್ ಕೇಳಿದರೆ ನಾನಾ ಕಾರಣ ಹೇಳಿ ಟಿಕೆಟ್ ತಪ್ಪುವುಂತೆ ಮಾಡುತ್ತಾರೆ. ೧೯೫೬ರಿಂದ ಇದುವರಗೆ ಬೆಂಗಳೂರುನಗರದಲ್ಲಿ ವಿಧಾನಸಭಾ ಚುನಾವಣೆ ವೀರಶೈವ ಲಿಂಗಾಯಿತರಿಗೆ ಟಿಕೆಟ್ ನೀಡಿಲ್ಲ ಅದು ಎಲ್ಲ ಪಕ್ಷದವರಿಗೆ ಆನ್ವಯವಾಗುತ್ತದೆ.
ನಮ್ಮ ಸಮುದಾಯ ಶಿಕ್ಷಣ, ಅನ್ನದಾಸೋಹದಲ್ಲಿ ಮಹತ್ವವಾದ ಕ್ರಾಂತಿ ತಂದು ಎಲ್ಲ ಸಮಾಜವನ್ನು ಮುನ್ನೇಡೆಸಿಕೊಂಡು ಹೋಗುತ್ತಿದೆ. ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ನಾಲ್ಕು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ರಾಜಾಜಿನಗರ, ಗೋವಿಂದರಾಜನಗರ ಮತ್ತು ವಿಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ನೀಡಬೇಕು ಎಂಬ ಒತ್ತಾಯ ಪಡಿಸಿದರು.