ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯತ್ವ
ಡಿಸೆಂಬರ್‍ನೊಳಗೆ ತೆಗೆದುಕೊಳ್ಳಲು ಮಹಾಸಭೆಗೆ ಮಂಡನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.18: ಸಂಘದ ಬೈಲಾ ತಿದ್ದುಪಡಿಗಳನ್ನು ಬರುವ ಅಕ್ಟೋಬರ್ 2022 ಅಂತ್ಯಕ್ಕೆ ಪೂರ್ಣಗೊಳಿಸಿ, ಕಾರ್ಯಕಾರಿ ಸಮಿತಿ ಅನುಮೋದನೆ ಪಡೆದು, ಡಿಸೆಂಬರ್ 2022 ರ ಅಂತ್ಯದೊಳಗೆ ಮಹಾಸಭೆಗೆ ಮಂಡಿಸಿ ಅನುಮೋದನೆ ಪಡೆದ ನಂತರ ಆಜೀವ ಸದಸ್ಯರನ್ನು ತೆಗೆದುಕೊಳ್ಳಲಾಗುವುದು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ್ ಅವರು ಸಂಘದ ನೂತನ ಸದಸ್ಯತ್ವ ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರ್ ಅವರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.
ಸಂಘದ ಸದಸ್ಯತ್ವ ನೀಡಲು ಕೋರಿ ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿದೆ. ಈ ವಿಷಯದಲ್ಲಿ 2010 ರ ಅಕ್ಟೋಬರ್ 3 ರಂದು ನಡೆದ ಸಂಘದ 93 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಸದಸ್ಯತ್ವದ ನೊಂದಣಿಯ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಅಲಿಸಿ, ಅಧ್ಯಕ್ಷರು ಇದಕ್ಕೆ ಸೂಕ್ತ ಬೈಲಾತಿದ್ದುಪಡಿಗಳನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತ್ತು ವಿಶೇಷ ಸರ್ವ ಸದಸ್ಯರ ಸಭೆ ಅನುಮತಿ ಪಡೆಯಬೇಕೆಂದು ಸಭೆಗೆ ತಿಳಿಸಿದ್ದರು.
ಸಂಘದ 2000 ರ ಬೈಲಾ ನಿಯಮಗಳನ್ನು ತಿದ್ದುಪಡಿ ಮಾಡುವ ವಿಷಯದಲ್ಲಿ ಹಾಲಿ ಇರುವ ಕಾರ್ಯಕಾರಿ ಸಮಿತಿ ಅಗತ್ಯ ತಿದ್ದುಪಡಿಗಳನ್ನು ತರಲು ಪ್ರಾರಂಭಿಸಲಾಗಿದೆ. ಬೈಲಾ ತಿದ್ದುಪಡಿಗಳನ್ನು ಅಕ್ಟೋಬರ್ 2022 ಅಂತ್ಯಕ್ಕೆ ಪೂರ್ಣಗೊಳಿಸಿ, ಕಾರ್ಯಕಾರಿ ಸಮಿತಿ ಅನುಮೋದನೆ ಪಡೆದು, ಡಿ,2022 ರ ಅಂತ್ಯದೊಳಗೆ ಮಹಾಸಭೆಗೆ ಮಂಡಿಸಿ ಅನುಮೋದನೆ ಪಡೆದು ನಂತರ ಆಜೀವ ಸದಸ್ಯರನ್ನು ತೆಗೆದುಕೊಳ್ಳಲು ನಿನ್ನೆ ನಡೆದ ಸಭೆಯಲ್ಲಿ ಮಂಡಿಸಿದೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
@12bc = ಧರಣಿ ಹಿಂದಕ್ಕೆ :
ಈ ವಿಷಯವಾಗಿ ಪತ್ರಿಕಾ ಹೇಳಿಕೆ ನೀಡಿರುವ ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರಗೌಡ ಅವರು ಸದಸ್ಯತ್ವಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಇದಕ್ಕಾಗಿ ಕಳೆದ ಎರೆಡು ದಿನಗಳ ಕಾಲಲೆಲ್ಲರ ಸಹಕಾರದಿಂದ ನಡೆದ ಹೋರಾಟದ ಫಲವಾಗಿ  ನಿನ್ನೆ ನಡೆದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಸಂಘದ ನೂತನ ಸದಸ್ಯತ್ವವನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಬರುವ ಡಿಸೆಂಬರ್ 2022 ರ ಒಳಗಾಗಿ ನೂತನ ಸದಸ್ಯತ್ವವನ್ನು ತೆಗೆದುಕೊಳ್ಳುವುದಾಗುವುದೆಂದು ಲಿಖಿತರೂಪದಲ್ಲಿ ನಮಗೆ ತಿಳಿಸಿದ್ದಾರೆ. ಆದ್ದರಿಂದ ಈ ಧರಣಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.