ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಶಿವಮೊಗ್ಗ, ನ. ೧೭:ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಸರ್ಕಾರವನ್ನ ಒತ್ತಾಯಿಸಿದೆ.
ಈ ಕುರಿತು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ರವರು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ತೆಲಂಗಾಣ, ಮಹಾರಾಷ್ಟ್ರ, ತಮಿಳು ನಾಡಿನಲ್ಲಿ ವೀರಶೈವ ಲಿಂಗಾಯಿತರನ್ನ ಕೇಂದ್ರ ಸರ್ಕಾರ ಹಿಂದುಳಿದ ಜನಾಂಗವೆಂದು ಪರಿಗಣಿಸಿದೆ. ಅದರಂತೆ ರಾಜ್ಯ ಸರ್ಕಾರ ಇದನ್ನ ಪರಿಗಣಿಸಿ ನಿಗಮವನ್ನ ಸ್ಥಾಪಿಸಬೇಕೆಂದರು. ಹಳ್ಳಿಗಾಡಿನ ಜನಾಂಗ ಇದಾಗಿದೆ. ಹಾಗಾಗಿ ಅಭಿವೃದ್ಧಿ ನಿಗಮವಾದರೆ ಸಮಾಜದ ಕೆಳಸ್ಥರದ ಜನರಿಗೆ ಅನುಕೂಲವಾಗಿದೆ. ೨೦೧೯ ರಲ್ಲಿ ಕುಮಾರ ಸ್ವಾಮಿಯವರು ಸಿಎಂ ಆದಾಗ ಸಮುದಾಯವನ್ನ ಒಬಿಸಿಗೆ ಮತ್ತು ನಿಗಮ ಮಂಡಳಿ ರಚಿಸುವಂತೆ ಒತ್ತಾಯಿಸಿ ಮನವಿ ನೀಡಲಾಗಿತ್ತು.
ಆದರೆ ಈ ಬಗ್ಗೆ ಸರ್ಕಾರ ಗಮನ ಹರಿಸಿ ಈಗಲಾದರೂ ನಿಗಮವನ್ನ ಸ್ಥಾಪಿಸಬೇಕೆಂದು ಕೋರಿದರು.