
ಚಿಂಚೋಳಿ,ಸೆ 16: ತಾಲೂಕಿನ ಹುಡದಳ್ಳಿ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನ ಮಂಜೂರು ಮಾಡಬೇಕೆಂದು ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷ ಸಂಜೀವಕುಮಾರ್ ಪಾಟೀಲ, ಅವರ ನೇತೃತ್ವದಲ್ಲಿ ಚಿಂಚೋಳಿಗೆ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ, ಅವರಿಗೆ ಸನ್ಮಾನ ಮಾಡಿ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಪವನ ಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ವೀರೇಶ ದೇಸಾಯಿ, ಚಿಂಚೋಳಿ ವೀರಶೈವ ಲಿಂಗಾಯತ ಸಮಾಜದ ನಗರ ಘಟಕ ಅಧ್ಯಕ್ಷ ಸಂಜು ಪಾಟೀಲ್ ಯ0ಪಳ್ಳಿ, ಮುಖಂಡರಾದ ಭೀಮಶೆಟ್ಟಿ ಮುರುಡ, ಸಂತೋಷ್ ಗಡಂತಿ, ಅಲ್ಲಂಪ್ರಭು ಪಾಟೀಲ್ ಹುಲಿ, ಸಂತೋಷ್ ಕಶೆಟ್ಟಿ, ಮಂಜುನಾಥ್ ಸ್ವಾಮಿ ಸುನಗಾನಮಠ, ವಿವೇಕ ಪಾಟೀಲ್, ಸುನಿಲ ಕಾಳಗಿ, ವಿಶಾಲ ಪಾಟೀಲ್, ಓಂ ಪ್ರಕಾಶ್ ಪಾಟೀಲ್ ಹುಡ್ದದಳ್ಳಿ, ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಅಶೋಕ್ ಪಾಟೀಲ, ಇದ್ದರು