ವೀರಶೈವ-ಲಿಂಗಾಯತ ಸಮುದಾಯದ ಎರಡು ದಶಕದ ಬೇಡಿಕೆ ಈಡೇರಿಕೆ: ಗುರುಮಲ್ಲಪ್ಪ

ಚಾಮರಾಜನಗರ, ನ.18: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಚಾಮರಾಜನಗರದಲ್ಲಿ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆ ಚಾಮರಾಜನಗರ ಘಟಕದ ಪದಾಧಿಕಾರಿಗಳು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಇಂದು ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಗುರುಮಲ್ಲಪ್ಪ ಎರಡು ದಶಕದ ಬೇಡಿಕೆಯನ್ನು ಯಡಿಯೂರಪ್ಪ ಅವರು ಇಂದು ಈಡೇರಿಸಿರುವುದು ವೀರಶೈವ-ಲಿಂಗಾಯತ ಸಮುದಾಯದಲ್ಲಿರುವ ಹಿಂದುಳಿದ ಹಾಗೂ ಬಡ ಕುಟುಂಬಗಳಿಗೆ ತುಂಬಾ ಅನುಕೂಲವಾಗಿದೆ.ಇವರ ಈ ನಿರ್ಧಾರಕ್ಕೆ ವೀರಶೈವ ಲಿಂಗಾಯತ ಯುವ ವೇದಿಕೆ ಅಭಿನಂದನೆ ಸಲ್ಲಿಸುತ್ತದೆ ಎಂದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಸಿ.ಡಿ.ಪ್ರಕಾಶ್,
ಕೂಸಣ್ಣ, ಜಿಲ್ಲಾ ಸಂಚಾಲಕರಾದ ಉಮೇಶ್, ಮಹೇಶ್, ರಘು, ಸಂತೋಷ್, ಗಣೇಶ್, ಅಭಿಷೇಕ್ ಸೇರಿದಂತೆ ಇತರರು ಇದ್ದರು.