ವೀರಶೈವ, ಲಿಂಗಾಯತ ಸಮಾಜ ಒಗ್ಗಟ್ಟು ಅಗತ್ಯ – ಶಂಕರ ಬಿದರಿ

ಬಯಲು ಸಿರಿ ಬೆಳಕು ಪ್ರಶಸ್ತಿ ಪ್ರದಾನ – ಪದಗ್ರಹಣ ಸಮಾರಂಭ
ರಾಯಚೂರು.ನ.೦೬- ವೀರಶೈವ, ಲಿಂಗಾಯತ ಸಮಾಜದ ಶಬ್ದ ಬೇರೆಯಾದರು ಅರ್ಥ ಒಂದೇ, ಎಲ್ಲರೂ ಒಗ್ಗಟ್ಟು ಪ್ರದರ್ಶನೆಯಿಂದ ಸಮಾಜ ಉಳಿಯಲು ಸಾಧ್ಯವೆಂದು ಅಖಿಲ ಕರ್ನಾಟಕ ವೀರಶೈವ, ಲಿಂಗಾಯತ ರಾಜ್ಯ ಉಪಾಧ್ಯಕ್ಷ ಶಂಕರ ಮಹಾದೇವ ಬಿದರಿ ಅವರು ಹೇಳಿದರು.
ಅವರಿಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬಯಲು ಸಿರಿ ಬೆಳಕು ಪ್ರಶಸ್ತಿ ಪ್ರದಾನ ಮತ್ತು ಕಾನೂನು, ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವೀರಶೈವ, ಲಿಂಗಾಯತ ಸಮುದಾಯವು ಎಂದಿಗೂ ಒಂದೇ. ಸಮಾಜವನ್ನು ಯಾರಿಂದಲೂ ಬೆರ್ಪಡಿಸಲು ಸಾಧ್ಯವಿಲ್ಲ. ಸಮುದಾಯವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಯಾಗಲು ಪ್ರಯತ್ನ ಮಾಡಬೇಕಾಗಿದೆ. ವೀರಶೈವ, ಲಿಂಗಾಯತ ಎಂಬ ವಿಭಜನೆ ಸಮಾಜ ಒಡೆಯುವ ಕೆಲಸಕ್ಕೆ ಸಮಾನ. ಸಮುದಾಯವು ಸಮಾಜ ಅಭಿವೃದ್ಧಿಗೆ ಶ್ರಮಿಸಿ ಮುಂದಿನ ಪೀಳಿಗೆಗೆ ಸಮಾಜವು ಮಾರ್ಗದರ್ಶವಾಗಬೇಕು.
ಸಮಾಜ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಅಭಿವೃದ್ಧಿ ಅಗತ್ಯವಾಗಿದೆ. ಎಲ್ಲಾ ವರ್ಗ ಸಮುದಾಯದ ಆಚಾರ, ವಿಚಾರಗಳು ಬೇರೆಯಾದರೂ, ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಆಗ ದೇಶ ಅಭಿವೃದ್ಧಿಯಾಗುತ್ತದೆಂದರು.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡುತ್ತಾ, ವೀರಶೈವ ಲಿಂಗಾಯತ ಸಮಾಜ ಬೇರೆಯಲ್ಲ. ಸಮಾಜದ ಎಲ್ಲರೂ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಬೇಡಿಕೆಯಾದ ವಸತಿ ನಿಲಯ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೆ ೧೫ ಕೋಟಿ ವೆಚ್ಚ ಅನುದಾನ ನೀಡುತೇನೆ ಎಂದು ಭರವಸೆ ನೀಡಿದರು. ವೀರಶೈವ ಮಹಾಸಭಾ ಕೊಡುಗೆ ಅಪಾರವಾಗಿದೆ. ಸಮಾಜ ಸೂಚಿಸುವ ಕೆಲಸ, ಕಾರ್ಯಗಳನ್ನು ನಿರ್ವಹಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರು ಅವರು ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಸಾವಿರದೇವರ ಸಂಸ್ಥಾನ ಮಠ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಕಿಲ್ಲೆಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಅಭಿನವ ರಾಜೋಟಿವೀರ ಶಿವಾಚಾರ್ಯ, ವೀರ ಸಂಗಮೇಶ್ವರ ಶಿವಾಚಾರ್ಯ, ಕೃಷಿ ಆಯೋಗ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ, ಸಿಂಡಿಕೇಟ್ ಸದಸ್ಯ ಜಗದೀಶ್, ರೇಖಾ ಕೇಶವರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.