ವೀರಶೈವ ಲಿಂಗಾಯತ ಸಮಾಜದಿಂದ ನೂತನ ಶಾಸಕರಿಗೆ ಸನ್ಮಾನ

ಗುರುಮಠಕಲ:ಮೇ.21: ನೂತನ ಶಾಸಕರಾಗಿ ಗೆಲುವು ಸಾದಿಸಿದ ಬಳಿಕ ಪ್ರಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆ ಪಟ್ಟಣದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತ. ನಿಜ ಶರಣ ಅಂಬಿಗರ ಚೌಡಯ್ಯ ವೃತ್ತ ಮತ್ತು ಗಂಗಾ ಪರಮೇಶ್ವರಿ ವೃತ್ತಗಳಲ್ಲಿ ಶಾಸಕರಿಗೆ ಅಭಿಮಾನಿಗಳು ಕಾರ್ಯಕರ್ತರು ನೆರೆದಿರುವ ಸಾರ್ವಜನಿಕರು ಹೂಮಳೆ ಗೈದು ಅದ್ದೂರಿಯಾಗಿ ಸ್ವಾಗತಿಸಿ ಶಾಸಕರನ್ನು ಬರಮಾಡಿ ಕೊಂಡರು ಇದೆ ವೇಳೆ ಪಟ್ಟಣದ ವೀರಶೈವ ಲಿಂಗಾಯತ ಸಮಜದ ವತಿಯಿಂದ ಸಣ್ಣ ಮಠದಲ್ಲಿಯು ಕೂಡ ಸಾಮಾಜದ ಬಾಂಧವರು ಶ್ರೀ ಮಠಕ್ಕೆ ಶಾಸಕರನ್ನು ಬರಮಾಡಿ ಕೊಂಡು ಶಾಸಕರು ಶ್ರೀ ಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆರ್ಶೀವಾದ ಪಡೆದು ಕೊಂಡರು. ಇದೆ ವೇಳೆ ಪಟ್ಟಣದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾನ ಖಾಸ ಮಠ ಗುರುಮಠಕಲ್ ಪೂಜ್ಯರ ಕರ್ತೃ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ ಪರಮ ಪೂಜ್ಯರ ಆರ್ಶೀವಾದ ಪಡೆದು ಕೊಂಡರು. ಈ ವೇಳೆ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಹಿರೇಮಠ.ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ. ಬ್ಲಾಕ್ ಅಧ್ಯಕ್ಷ ರಾದ ಪ್ರಕಾಶ ನಿರೇಟಿ. ಜ್ಞಾನೇಶ್ವರ ರೆಡ್ಡಿ. ಜಿ. ತಮ್ಮಣ್ಣ .ನರಸರೆಡ್ಡಿ ಗಡ್ಡೆಸೂಗುರು ಗುರುಮಠಕಲ್. ಶಿವಕುಮಾರ .ನಾಗಭೂಷಣ ಅವುಂಟಿ. ಜಗದೀಶ್ ಭೂಮ. ಶಂಕ್ರಯ್ಯ ಸ್ವಾಮಿ. ಪ್ರಕಾಶ ಸಜ್ಜನ್. ದೇವರಹಳ್ಳಿ ಬಸಣ್ಣ. ಅನಂತಪ್ಪ ಬೋಯಿನ. ಆಶನ್ನಬುದ್ದ. ಹಾಗೂ ಸಾವಿರಾರು ಜನ ಕಾರ್ಯಕರ್ತರು ಅಭಿಮಾನಿಗಳು ಅದ್ದೂರಿಯ ಸ್ವಾಗತ ಸಮಾರಂಭ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.