ವೀರಶೈವ ಲಿಂಗಾಯತ ಮಹಾಸಭಾದ ಅಂದ್ರಪ್ರದೇಶದ  ಅಧ್ಯಕ್ಷರಾಗಿ ಡಿ.ಶಿವಾನಂದ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಆಂದ್ರ ಪ್ರದೇಶದ ರಾಜ್ಯ ಅಧ್ಯಕ್ಷರನ್ನಾಗಿ  ದಂಡಿನ ಶಿವಾನಂದ ಅವರನ್ನು ನೇಮಕ‌ ಮಾಡಲಾಗಿದೆ.
ನಗರದಲ್ಲಿ ಕಾಟನ್ ಮರ್ಚೆಂಟ್ ಆಗಿರುವ ಶಿವಾನಂದ ಅವರು ಹಲವು ವರ್ಷಗಳಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕ್ರಪ್ಪ ಅವರು. ಸಮುದಾಯದ ಅಭಿವೃದ್ಧಿಗೆ  ತಮ್ಮ ಸೇವೆಯನ್ನು ಪರಿಗಣಿಸಿ ನೇಮಕ ಮಾಡಿದ್ದಾರೆ.
ತಮಗೆ ನೀಡಿರುವ ಈ ಜವಾಬ್ದಾರಿಯನ್ನು ಪಡೆದು ಸಮುದಾಯದ ಜನರ ಸಂಘಟನೆ ಮತ್ತು ವಿದ್ಯೆ, ಉದ್ಯೋಗ ಮೊದಲಾದವುಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿದೆಂದು ಹೇಳಿದ್ದಾರೆ.