ವೀರಶೈವ ಲಿಂಗಾಯತ ಪ್ರಾಮುಖ್ಯ ಹೇಳಿಕೆ ಖಂಡನೆ 

ಸೊರಬ. ಮಾ.16:  ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆಯನ್ನು ಕೊಡಬೇಕಿಲ್ಲ ಎನ್ನುವ ಹೇಳಿಕೆ ನೀಡಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಹೇಳಿಕೆಯನ್ನು  ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಖಂಡಿಸುತ್ತದೆ ಎಂದು  ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮಧ್ಯ ಕರ್ನಾಟಕ ಪ್ರದೇಶದ ಅಧ್ಯಕ್ಷ ಸಿ.ಪಿ.ಈರೇಶ ಗೌಡ ಪತ್ರಿಕಾ ಹೇಳಿಕೆ ನೀಡಿದ ಅವರು  ವೀರಶೈವ ಸಮಾಜವೂ ಸಮಾಜದಲ್ಲಿ ತನ್ನದೇ ಆದ ವೈಶಿಷ್ಟ್ಯವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಎಷ್ಟೇ ಸಮಸ್ಯೆಗಳಿದ್ದರೂ ಒಗ್ಗಟ್ಟಾಗಿ ಬದುಕುವ ಸಮಾಜವಾಗಿದೆ ಸಿ.ಟಿ ರವಿ ಅವರಂತವರಿಂದ ವೀರಶೈವ ಸಮಾಜವು ಬುದ್ಧಿ ಕಲಿಯುವ ಅಗತ್ಯವಿಲ್ಲ ಎಂದ ಅವರು  ನಮ್ಮ ಸಮಾಜದ ಬಗ್ಗೆ ನಿರ್ಲಕ್ಷತನದ ಮಾತನಾಡುವ ನೈತಿಕತೆ ಇಲ್ಲ. ಕೂಡಲೇ ಬಿಜೆಪಿ ಪಕ್ಷದಿಂದ ಇವರನ್ನ ಉಚ್ಚಾಟನೆ ಮಾಡಬೇಕು. ಲಿಂಗಾಯಿತ ಸಮಾಜದ ಕ್ಷಮೆಯನ್ನು ಕೇಳಬೇಕು ಇಲ್ಲದಿದ್ದರೆ ಒಂದು ವಾರದೊಳಗೆ ಅವರ ಮನೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.