ವೀರಶೈವ-ಲಿಂಗಾಯತ ನಿಗಮದಡಿ 38 ಕೊಳವೆ ಬಾವಿ ಮಂಜೂರು

ಭಾಲ್ಕಿ:ಮಾ.15: ತಾಲೂಕಿನಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಡಿ 38 ಕೊಳವೆ ಬಾವಿ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹೊರ ವಲಯದ ರೈತ ಚೇತನ ಮಾಶೆಟ್ಟೆ ಹೊಲದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಜೀವ ಜಲ ಯೋಜನೆಯಡಿ ಮಂಜೂರಾದ ಕೊಳವೆ ಬಾವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವೀರಶೈವ-ಲಿಂಗಾಯತ ಸಮುದಾಯದ ತಾಲೂಕಿನ ಸಣ್ಣ ಮತ್ತು ರೈತರ ಜಮೀನಿಗೆ ನೀರು ಒದಗಿಸುವ ಉದ್ದೇಶದಿಂದ ನಿಗಮದಡಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಎಂಬಂತೆ 2021-22 ಸಾಲಿನಲ್ಲಿ 12 ಮತ್ತು 2022-23ನೇ ಸಾಲಿನಲ್ಲಿ 26 ಕೊಳವೆ ಬಾವಿ ಮಂಜೂರು ಮಾಡಿಸಲಾಗಿದೆ.

ಸೌಲಭ್ಯ ಪಡೆದ ರೈತರು ಜೀವನಮಟ್ಟ ಸುಧಾರಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಯುವ ಮುಖಂಡ ಪ್ರವೀಣ ಹಣಮಶೆಟ್ಟಿ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಎಂ.ಡಿ.ಅಮರೇಗೌಡ್ ಸೇರಿದಂತೆ ಹಲವರು ಇದ್ದರು.