ವೀರಶೈವ ಲಿಂಗಾಯತ ಉಪಜಾತಿಗಳನ್ನು ಓಬಿಸಿಗೆ ಸೇರಿಸಲು ಆಗ್ರಹಿಸಿ ರ್ಯಾಲಿ

ಕಲಬುರಗಿ,ಸೆ.16- ಎಲ್ಲಾ ವೀರಶೈವ ಲಿಂಗಾಯತ ಉಪಜಾತಿಗಳನ್ನು ಓಬಿಸಿ ಪ್ರವರ್ಗಕ್ಕೆ ಸೇರಿಸಲು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿಂದು ಪ್ರತಿಭಟನಾ ರ್ಯಾಲಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಯಿತು.
ಬೆಂಗಳೂರು ಮೆಟ್ರೋ ರೈಲಿಗೆ ವಿಶ್ವಗುರು ಬಸವೇಶ್ವರರ ಹೆಸರಿಡಬೇಕು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರ ಹೆಸರಿಡಬೇಕು, ನಡೆದಾಡುವ ದೇವರು ಪೂಜ್ಯ ಲಿ/ಡಾ.ಶಿವಕುಮಾರ ಮಹಾಸ್ವಾಮಿಜಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿನೀಡಿ ಗೌರವಿಸಬೇಕು, ಎಲ್ಲ ತಾಲುಕು ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಭವನ ಹಾಗೂ ಶ್ರೀಸಿದ್ದಗಂಗಾ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಸ್ಥಾಪಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ, ಸಚಿನ ಪಾಟೀಲ, ಎನ್.ಶ್ರೀಧರ, ಕಲ್ಯಾಣರಾವ ಪಾಟೀಲ, ಮಹೇಶ್ಚಂದ್ರ ಪಾಟೀಲ ಕಣ್ಣಿ, ಸತಿಷ ಡಿ, ಗುರು ಅಂವಾಡಿ, ಅವಿನಾಶ ಅರಳಿ ಸೇರಿದಂತೆ ವೀರಶೈವ ಸಮುದಾಯದ ಹರಗುರು ಚರಮೂರ್ತಿಗಳು ಮತ್ತು ಮಹಾಸ್ವಾಮಿಗಳು ಭಾಗವಹಿಸಿದ್ದರು.