ವೀರಶೈವ ಲಿಂಗಾಯತರನ್ನು  ಓಬಿಸಿಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯಿಸಿ ಬೃಹತ್ ಮೆರವಣಿಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ಅಖಿಲ ಭಾರತ ಮಹಾ ಸಭಾದ ರಾಜ್ಯ ಅಧ್ಯಕ್ಷ ಡಾ. ಎನ್.ತಿಪ್ಪಣ್ಣ ಅವರ ನೇತೃತ್ವದಲ್ಲಿ  ಇಂದು ನಗರದಲ್ಲಿ ಕೇಂದ್ರ ಸರ್ಕಾರ ತನ್ನ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು   ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಕರೆಯ ಮೇರೆಗೆ ಇಂದು ಬೆಳಿಗ್ಗೆ ನಗರದ    ಮುನಿಷಿಪಲ್ ಹೈಸ್ಕೂಲ್ ಮೈದಾನಕ್ಕೆ ಸೇರಿದ ಸಮುದಾಯದ ಜನತೆ,
ಎಮಗನಿಗನೂರು, ಹರಗಿನದೋಣೊ ಸೇರಿದಂತೆ ವಿವಿಧ ಮಠಾಧೀಶರು, ಎನ್.ತಿಪ್ಪಣ್ಣ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಡಾ.ಎಸ್.ಜೆ.ವಿ.ಮಹಿಪಾಲ್, ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಉಪಾಧ್ಯಕ್ಷ. ಅಲ್ಲಂ ಚೆಬ್ನಪ್ಪ, ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಖಜಾಂಚಿ ಗೋನಾಳ್ ರಾಜಶೇಖರಗೌಡ ಮೊದಲಾದವರೊಂದಿಗೆ ಮೆರವಣಿಗೆ ಆರಂಭಗೊಂಡು. ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ  ಎಡಿಸಿ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು.
 ವೀರಶೈವ ಲಿಂಗಾಯತ ಸಮುದಾಯವು ಕೃಷಿ ಮತ್ತು ಕೃಷಿ ಆಧಾರಿತ ಕಸಬುಗಳನ್ನು ಅವಲಂಬಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ, ಈ  ಸಮಾಜದ ಜನ  ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿಯಲ್ಲಿ ವಂಚಿತರಾಗಿದ್ದಾರೆ.
ಸಮಾಜದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ, ಕೆಂದ್ರದ ಮೀಸಲಾತಿಯ ಓ.ಬಿ.ಸಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.
ಈಗ ಹೋರಾಟ ಅಸರಂಭಗೊಂಡಿದೆ. ರಾಜ್ಯ ಸರ್ಕಾರ, ಸಂಸದರು ಒತ್ತಡ ತಂದು ಕೇಂದ್ರ ಸರ್ಕಾರ ಸ್ಪಂದಿಸುವಂತೆ ಮಾಡಲು ಆಗ್ರಹಿಸಿದರು.
ವೀ.ವಿ.ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ,  ಸಂಘದ ಸದಸ್ಯರು, ಸಮುದಾಯದ ವಿವಿಧ ಮುಖಂಡರು, 
ಮಹಾ ಸಭಾದ ರಾಜ್ಯ ಕಾರ್ಯದರ್ಶಿ ಕೆ.ಬಿ ಶ್ರೀನಿವಾಸ ರೆಡ್ಡಿ,  ಅರವಿ ಬಸವನಗೌಡ, ಜೆ.ಎಂ.ಬಸವರಾಜ್ ಸ್ವಾಮಿ,  ಅಲ್ಲಂ ಪ್ರಶಾಂತ್,ಗಂಗಾವತಿ ವೀರೇಶ್  ಮೊದಲಾದವರು ಇದ್ದರು.