ವೀರಶೈವ ರುದ್ರಭೂಮಿ ಜಾಗ ಮುಂದುವರಿಸಿ ವೀರಶೈವ ಸಮುದಾಯ ಒತ್ತಾಯ

ದೇವದುರ್ಗ.ಜು.೧೬- ಪಟ್ಟಣದ ಸರ್ವೇ ನಂ.೨೭೩/೧ರಲ್ಲಿ ೪.೧೧ ಎಕರೆ, ನಂ.೨೭೩/೨ರಲ್ಲಿ ೧೦ಗುಂಟೆ ಜಾಗದಲ್ಲಿ ವೀರಶೈವ ಸಮುದಾಯ ರುದ್ರಭೂಮಿ ಆಗಿ ಉಪಯೋಗಿಸುತ್ತಿದ್ದು, ಈ ಜಾಗ ಅನ್ಯಕಾರ್ಯಕ್ಕೆ ಬಳಸದೆ ರುದ್ರಭೂಮಿಯಾಗಿ ಮುಂದುವರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ತಾಲೂಕು ವೀರಶೈವ ಸಮುದಾಯದ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ಸದರಿ ಎರಡು ಸರ್ವೇ ನಂ.ನಲ್ಲಿ ೪.೨೧ಎಕರೆ ಜಾಗ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯ ರುದ್ರಭೂಮಿ ಆಗಿ ಬಳಕೆ ಮಾಡುತ್ತದೆ. ಆದರೆ, ಸರಿ ಜಾಗದಲ್ಲಿ ಒಂದು ಎಕರೆ ಜಮೀನು ರಾಜ್ಯ ಹೆದ್ದಾರಿಗಾಗಿ ಬಳಸಿಕೊಳ್ಳಲಾಗಿದೆ. ಉಳಿದ ೩.೨೧ಎಕರೆ ಜಾಗದಲ್ಲಿ ಶ್ರೀಬೂದಿಬಸವೇಶ್ವರ ದೇವಸ್ಥಾನವಿದ್ದು, ಅಕ್ಕಪಕ್ಕದಲ್ಲಿ ಕೆಲವರು ಡಬ್ಬಿಗಳನ್ನು ಹಾಕಿಕೊಂಡಿದ್ದಾರೆ. ಆದರೆ, ಸದರಿ ಜಾಗ ದೇವಸ್ಥಾನಕ್ಕೆ ನೀಡಬೇಕು ಎಂದು ಕೆಲವರು ಮನವಿ ಮಾಡಿದ್ದಾರೆ.
ರುದ್ರಭೂಮಿ ಜಾಗ ಬೇರೆ ಕಾರ್ಯಕ್ಕೆ ಬಳಸುವುದರಿಂದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಜಾಗದ ಸಮಸ್ಯೆ ಎದುರಾಗಲಿದೆ. ಸದರಿ ಜಾಗ ವೀರಶೈವ ಲಿಂಗಾಗಯ ರುದ್ರಭೂಮಿಗೆ ಸೇರಬೇಕು. ಆದರೆ, ಅದನ್ನು ಕೆಲವರು ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಉಳಿದ ೩.೨೧ ಜಾಗ ವೀರಶೈವ ರುದ್ರಭೂಮಿಗಾಗಿ ಮೀಸಲಿರಿಸಿ ರಕ್ಷಣೆ ಮಾಡಬೇಕು. ಸದರಿ ಜಾಗವನ್ನು ಬೂದಿಬಸವೇಶ್ವರ ದೇವಸ್ಥಾನಕ್ಕೆ ನೀಡಬಾರದು ಎಂದು ಮನವಿ ಮಾಡಿದರು. ಮುಖಂಡರಾದ ಕಿರಣ್ ಖೇಣೇದ್, ಆರ್.ವೀರಭದ್ರಪ್ಪ, ಪಿ.ಶರಣಪ್ಪ, ಬಸವರಾಜ, ಸಿದ್ದಪ್ಪ, ತಿಮ್ಮಣ್ಣ, ಮಲ್ಲಿಕಾರ್ಜುನ, ಸುರೇಶ, ಶಿವರಾಜ ಗೌಳಿ, ಕೆ.ಸೂಗಪ್ಪ ಕುಂಬಾರ, ಇಂಗಳದಾಳ ಚಂದ್ರಶೇಖರ, ದೊಡ್ಡ ರಂಗಪ್ಪ ಅಳ್ಳುಂಡಿ, ಬಸವರಾಜಪ್ಪ, ಶರಣಪ್ಪ ಬಳೆ, ಈಶಪ್ಪಗೌಡ ಇತರರಿದ್ದರು.