ವೀರಶೈವ ಮುಖಂಡ ಗೊಗ್ಗ ಸಿದ್ದರಾಮಯ್ಯ ಇನ್ನಿಲ್ಲ

ಹೊಸಪೇಟೆ ಏ 02 : ಕೊಡುಗೈ ದಾನಿ ವೀರಶೈವ ಸಮಾಜದ ಹಿರಿಯರಾಗಿದ್ದ ಗೊಗ್ಗ ಸಿದ್ದರಾಮಯ್ಯ (74) ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ 4 ಜನ ಮಕ್ಕಳು ಇದ್ದಾರೆ. ಕೆಲ ದಿನಗಳಿಂದ ಆರೋಗ್ಯ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ವೀರಶೈವ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾಗಿದ್ದ ಇವರು ಸಮಾಜಮುಖಿ ಸೇವೆ ವರ್ಣಾತೀತವಾಗಿತು. ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಇವರ ಸಾವು ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ನೋವು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲೆಂದು ಅನೇಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.