ವೀರಶೈವ ಮಹಾಸಭಾ: ನ.10 ಸದಸ್ಯತ್ವಕ್ಕೆ ಕೊನೆ ದಿನ

ರಾಯಚೂರು.ನ.5-ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ನಡೆಸಲಾಗಿರುವ ಚುನಾವಣೆಯಲ್ಲಿ ಭಾಗಿಯಾಗದ ರಾಯಚೂರು, ಮಾನ್ವಿ, ದೇವದುರ್ಗ ತಾಲೂಕುಗಳಿಗೆ ಚುನಾವಣೆ ನಡೆಯಲಿದ್ದು, ಸದಸ್ಯರಾಗಲು ಅರ್ಜಿ ಸಲ್ಲಿಸುವವರಿಗೆ ನ.10 ಕೊನೆಯ ದಿನಾಂಕವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣಾಧಿಕಾರಿ ಹೆಚ್.ಎಂ.ರೇಣುಕಾಪ್ರಸನ್ನ ಅವರು ತಿಳಿಸಿದರು.
ಅವರಿಂದು ನಗರದ ಬಸವನಗರದಲ್ಲಿರುವ ಬಸವಕೇಂದ್ರದಲ್ಲಿ ಸುದ್ದಿಗರೊಂದಿಗೆ ಮಾತನಾಡುತ್ತಾ, ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ 106 ತಾಲೂಕು ಘಟಕಗಳಿಗೆ ಚುನಾವಣೆ ನಡೆದಿದೆ. ಉಳಿದ ಜಿಲ್ಲೆ ಮತ್ತು ತಾಲೂಕುಗಳಿಗೆ ಚುನಾವಣೆ ನಡೆಯಲಿದೆ. ನಿಯಮದ ಪ್ರಕಾರ ಅರ್ಹತೆ ಪಡೆದ ಜಿಲ್ಲೆ ಮತ್ತು ತಾಲೂಕುಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ನಮ್ಮ ಮಹಾಸಭಾಕ್ಕೆ ಸದಸ್ಯರಾಗಲು ಬಯಸಿದವರು ನ.10ಕ್ಕೆ ಕೊನೆಯ ದಿನವಾದರೆ, ನ.30ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿ.9 ರಿಂದು ನಾಮಪತ್ರ ಸ್ವೀಕರಿಸಲಿದ್ದು, ಡಿ.15 ನಾಮಪತ್ರ ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ. ಡಿ.27ಕ್ಕೆ ಮತದಾನ ನಡೆಯಲಿದೆ ಎಂದರು.
ತಾಲೂಕು ಘಟಕಗಳಿಗೆ ಚುನಾವಣೆ ನಡೆಯಬೇಕಾದರೆ ಕನಿಷ್ಟ 300 ಜನ ಸದಸ್ಯರಿರಬೇಕು, ಈ ಮಾನದಂಡಗಳ ಆಧಾರದ ಮೇಲೆ ಮಾನ್ವಿ, ರಾಯಚೂರು, ದೇವದುರ್ಗ ತಾಲೂಕುಗಳು ಅರ್ಹತೆ ಹೊಂದಿದ್ದು, ಇಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಸಂಘದ ಸದಸ್ಯರಾಗುವವರಿಗೆ ಚುನಾವಣೆಯಲಿ ಸ್ಪರ್ಧಿಸಲು ಹಾಗೂ ಮತದಾನದಲ್ಲಿ ಭಾಗವಹಿಸಲು ಅವಕಾಶವಿದ್ದು, ಸಮಾಜದ ಬಾಂಧವರು ಇದನ್ನು ಸದುಪಯೋಗಪಡಿಸಿಕೊಂಡು ಸದಸ್ಯರಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಮಿರ್ಜಾಪೂರ ಚಂದ್ರಶೇಖರ ಪಾಟೀಲ್, ಭೀಮಾರೆಡ್ಡಿ, ನೀಲಕಂಠಸ್ವಾಮಿ, ಶಿವುಕುಮಾರ ಜವಳಿ,ಮಲ್ಲಿಕಾರ್ಜುನ ಗೌಡ ಸಿಂಗಡದಿನ್ನಿ,
ಶರಣಪ್ಪ ಮೇಟಿ, ಬಸವರಾಜ,ವಾಣಿ ಸಾಹುಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.