ವೀರಶೈವ ಮಹಾಸಭಾ ಚುನಾವಣೆ ಡಿ.27ರಂದು ಸಮುದಾಯದ ಏಳಿಗೆಗೆ ಸದಸ್ಯರಾಗಿ ಚುನಾವಣೆಯಲ್ಲಿ ಭಾಗವಹಿಸಿ: ರಾಷ್ಟ್ರೀಯ ಕಾರ್ಯದರ್ಶಿ ರೇಣುಕ ಪ್ರಸನ್ನ

ಹೊಸಪೇಟೆ, ನ.6: ಸಮಾಜದ ಏಳಿಗೆಗಾಗಿ ದುಡಿಯುವ ವ್ಯಕ್ತಿಯನ್ನು ಸಮಾಜದ ಪ್ರತಿನಿಧಿಯನ್ನಾಗಿಸಲು ವೀರಶೈವ ಭಾಂಧವರಿಗೆ ಇದು ಸುವರ್ಣಾವಕಾಶವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಮಹಾಸಭಾ ಚುನಾವಣಾಧಿಕಾರಿಗಳಾದ ಹೆಚ್.ಎಂ.ರೇಣುಕ ಪ್ರಸನ್ನ ಅವರು ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಣಿ ಚುನಾವಣಾ ಸಭೆಯ ಹಿನ್ನಲೆಯಲ್ಲಿ ನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ 12 ಜಿಲ್ಲೆಗಳು ಹಾಗೂ 106 ತಾಲೂಕಿನಲ್ಲಿ ಚುನಾವಣೆ ನಡೆದಿದ್ದು, ಉಳಿದ ಜಿಲ್ಲೆಗಳ ಚುನಾವಣೆ ನಡೆಯಬೇಕಾಗಿದೆ. ಜಿಲ್ಲೆಯ 6 ಘಟಕಗಳಿಲ್ಲೂ ಈಗಾಗಲೇ ಚುನಾವಣೆ ನಡೆದಿದೆ. ಬಳ್ಳಾರಿ ಜಿಲ್ಲಾ ಘಟಕ ಚುನಾವಣೆಗೆ ಅರ್ಹತೆ ಪಡೆದಿದ್ದು, ಕೂಡ್ಲಿಗಿ ತಾಲೂಕು 240 ಸದಸ್ಯರನ್ನು ಹೊಂದಿದೆ ಕನಿಷ್ಠ 300 ಜನ ಸದಸ್ಯರಿರಬೇಕೆಂಬ ನಿಯಮವಿದ್ದು, ಅವಶ್ಯ ಸದಸ್ಯರು ನೋಂದಣಿಗೊಂಡರೆ ಡಿ.27ರಂದು ಚುನಾವಣೆ ನಡೆಸಲಾಗುತ್ತದೆ ಎಂದರು.
ವೀರಶೈವ ಸಮಾಜ ಬಾಂಧವರು ನ.10ರ ಒಳಗಾಗಿ ಸದಸ್ಯತ್ವ ನೋಂದಣಿಗೆ ಅವಕಾಶವಿದ್ದು,
ಸಂಘದಲ್ಲಿರುವ ಮತದಾರರ ಪಟ್ಟಿಯನ್ನು ನ.30ರಂದು ಬಿಡುಗಡೆ ಮಾಡಲಾಗುತ್ತದೆ.
ಡಿ‌.09ರಂದು ನಾಮಪತ್ರ ಸ್ವೀಕರಣೆ, ಡಿ.15ನಾಮಪತ್ರ ಸ್ವೀಕಾರ ಕೊನೆಯ ದಿನ, ಡಿ.16 ನಾಮಪತ್ರ ಪರಿಶೀಲನೆ, ಡಿ.19ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಅನಿವಾರ್ಯ ಇದ್ದ ಸಂದರ್ಭದಲ್ಲಿ ಡಿ.27ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಚುನಾವಣೆ ನಡೆಸಿ, ಮತದಾನದ ನಂತರ ಮತಗಳ ಎಣಿಕೆ ನಡೆಸಲಾಗುತ್ತದೆ.
ಸಂಘದ ಸದಸ್ಯರಾಗಿ ಸದೃಡ ಸಮಾಜ ನಿರ್ಮಿಸಿ ಸಮುದಾಯದ ಯೋಜನೆಗಳ ಈಡೇರಿಕೆಗೆ ಕೊಡುಗೆ ನೀಡಲು ಸಮಾಜ ಬಾಂಧವರಿಗೆ ಸುವರ್ಣ ಅವಕಾಶ ಇದಾಗಿದ್ದು ಸದಸ್ಯತ್ವ ಹೊಂದಿ ಮತದಾನ ಪಾಲ್ಗೊಳ್ಳಬೇಕು, ಇಂದು ಅವರು ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಬೆಳಿಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಚುನಾವಣಾ ಪೂರ್ವಭಾವಿ ಸಭೆ ನಡೆಸಿ ಸದಸ್ಯರು ನೀಡಿರುವ ಸಲಹೆಡಳನ್ನು ಮುಕ್ತವಾಗಿ ಸ್ವೀಕರಿಸಿದ್ದು ಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂದರು.
ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿಗಳಾದ ಶ್ರೀನಿವಾಸ ರೆಡ್ಡಿ ಮಾತನಾಡಿ ಬಳ್ಳಾರಿಯಲ್ಲಿ ಈಗಾಗಲೇ 1300 ಸದಸ್ಯರಿದ್ದು ವೀರಶೈವ ಮಹಾಸಭಾ ವತಿಯಿಂದ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲು ಸೂಚಿಸಿದರು.
ವೀರಶೈವ ಮಹಾಸಭಾ ಬಳ್ಳಾರಿ ಘಟಕದ ಅಧ್ಯಕ್ಷರಾದ ಸಾಲಿ ಸಿದ್ಧಯ್ಯ ಸ್ವಾಮಿ ಅವರು ಮಾತನಾಡಿ ಸಂಘದ ಬೈಲಾ ತಿದ್ದುಪಡಿಯಾಗಿದ್ದು ಸದ್ಯ ನಾಮನಿರ್ದೇಶಿತ ಸದಸ್ಯನಾಗಿದ್ದೇನೆ, ಮುದಿನ ದಿನಗಳಲ್ಲಿ ನಡೆಯುವ ಮತದಾನದ ಆಯ್ಕೆ ಪ್ರಧಾನವಾಗಿದ್ದು ಸಂಘದ ನೋಂದಾಯಿತ ಸದಸ್ಯರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು‌.
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಮಹಾಸಭಾ ಕಾರ್ಯದರ್ಶಿಗಳಾದ ಅಸುಂಡಿ ನಾಗರಾಜ್ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳಾದ
ಕೊಟ್ರೇಶ್, ಶಿವರುದ್ರಪ್ಪ, ಶರಣಬಸಪ್ಪ, ಉಮಾಪತಿ ಗೌಡ ಹಾಗೂ ವೀರಶೈವ ಮಹಾಸಭಾದ ಸದಸ್ಯರು ಇದ್ದರು.