ವೀರಶೈವ ಮಹಾಸಭಾದಿಂದ ಬಕ್ಕೇಶ್ವರ ಮಹಾಸ್ವಾಮಿಗೆ ರುದ್ರಾಭಿಷೇಕ

ದಾವಣಗೆರೆ.ಏ.೨೨: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಅಖಿಲ ಭಾರತ ವಿರಶೈವ ಮಹಾಸಭಾದ  ಜಿಲ್ಲಾ ಘಟಕದ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ನೇತೃತ್ವದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಿ ಪ್ರಾರ್ಥನೆ ಮಾಡಿ ಪ್ರಸಾದ ಹಂಚಲಾಯಿತು,
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಸೋಗಿ ಶಾಂತಕುಮಾರ್, ಶ್ರೀಧರ ಪಾಟೀಲ್, ಶ್ರೀಕಾಂತ್ ನೀಲಗುಂದ, ಟಿಂಕರ್ ಮಂಜಣ್ಣ, ಜಯಪ್ರಕಾಶ್ ಮಾಗಿ,ಕರಿವಪ್ಳರ್ ಸಿದ್ದೇಶ್,ದೇವೇಂದ್ರಪ್ಪ,ಶಿವಾನಂದ ಬೆನ್ನುರ್,ನಾಗರಾಜ್ ಅಂಗಡಿ, ಅಭಿಷೇಕ ಪಿ.ಎಳೇಹೊಳೆ,ಗುರು ಸೊಗಿ,ಗುಡಿಹಳ್ಳಿ ಬಸವರಾಜ್,ಅಣಜಿ ಪ್ರಶಾಂತ್, ಮಹಿಳಾ ಘಟದ ಶೋಭಾ ಕೊಟ್ರೇಶ್,ಪುಷ್ಪ ವಾಲಿ,ದ್ರಾಕ್ಷಾಯಣಿ ಅಂದಾನಪ್ಪ,ಮಂಜುಳಾ ಕೆ.ಇ,ರತ್ತಾ ಸದಾಶಿವ ಮತ್ತಿತರರು ಪಾಲ್ಗೊಂಡಿದ್ದರು.