ವೀರಶೈವ ಮಠಗಳ ಸೇವೆ ಅನನ್ಯ:ಶಾಸಕ ಈಶ್ವರ ಬಿ.ಖಂಡ್ರೆ

ಬೀದರ,ಮಾ.07: ವೀರಶೈವ ಮಠಗಳು ಧರ್ಮದ ರಕ್ಷಣೆ ಪ್ರಚಾರದ ಜೊತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ,ವಸತಿ, ಅನ್ನದಾಸೋಹ ಹಾಗೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತಹ ಅನನ್ಯ ಸೇವೆಗಳನ್ನು ಮಾಡುವ ಮೂಲಕ ಮಾದರಿಯಾಗಿವೆ ಎಂದು ಭಾಲ್ಕಿ ಶಾಸಕ ಈಶ್ವರ ಬಿ. ಖಂಡ್ರೆ ಹೇಳಿದರು ಅವರು ರವಿವಾರ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಾರ್ಶನಿಕರ ಸಂದೇಶ ಹಾಗೂ ಆದರ್ಶಗಳು ಇಂದಿನ ಸಮಾಜಕ್ಕೆ ಅರಿವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಅವರ ಜಯಂತಿಯನ್ನು ಆಚರಿಸುತ್ತಿವೆ. ಆದ್ದರಿಂದ ನಾವು ಅವರ ತತ್ವ ಆದರ್ಶವನ್ನು ನಮ್ಮ ಜೀವದಲ್ಲಿ ಅಳವಡಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಸಮುದಾಯವು ಆರ್ಥಿಕವಾಗಿ ಬಲಿಷ್ಠವಾದರು ಸಾಮೂಹಿಕವಾಗಿ ಒಗ್ಗಟಾಗಿಲ್ಲಾ, ಈ ಸಮಸ್ಯೆಯನ್ನು ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮೂಲಕ ನಿವಾರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಭಾರತ ಪ್ರಸ್ತುತ ಶೇ.70 ರಷ್ಟು ಯುವಸಮೂಹ ಹೊಂದಿದ ದೇಶವಾಗಿದ್ದು, ಪ್ರಪಂಚದ ಹಲವಾರು ದೇಶಗಳಲ್ಲಿ ಭಾರತೀಯ ಯುವಕರು ವೈದ್ಯಕೀಯ, ಇಂಜೀನಿಯರಿಂಗ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವುದರಿಂದ ಇಂದು ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಜಗತ್ತಿನಲ್ಲಿಯೇ ಭಾರತವು ವಿವಿಧ ಸಂಸ್ಕ್ರತಿ, ಪರಂಪರೆ ಹೊಂದಿದ ದೇಶವಾಗಿದ್ದು, ನಾವೇಲರು ಮೊದಲು ಭಾರತೀಯರು ನಂತರ ವಿವಿಧ ಧರ್ಮಿಯರು ಎನ್ನುವ ಮೂಲಕ ನಾವು ಒಗ್ಗಟಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಬೀದರ ಉತ್ತರ ಶಾಸಕ ರಹೀಮ ಖಾನ್ ಮಾತನಾಡಿ, ಎಲ್ಲಾ ಮಹಾತ್ಮರ ಸಂದೇಶದ ಉದ್ದೇಶ ಒಂದೆಯಾಗಿದ್ದು ನಾವು ಅವರ ಮಾರ್ಗದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವುದು. ನಾವು ದೇವರುಗಳಿಗೆ ಮಂದಿರ, ಮಜೀದ್‍ದಲ್ಲಿ ಸಿಮೀತಗೊಳಿಸಿದ್ದೆವೆ ದೇವನು ಸರ್ವವ್ಯಾಪಿಯಾಗಿದ್ದಾನೆ ಎಂದು ಹೇಳಿದರು.

ನಮ್ಮ ಸುತ್ತ ಮುತ್ತಲಿನ ಪರಿಸರು ನಮ್ಮೆರನ್ನು ಒಂದೇ ರೀತಿ ಕಾಣುವಂತೆ ನಾವು ಎಲ್ಲಾ ಮಹಾತ್ಮರನ್ನು ನಾವು ಒಂದೇ ರೀತಿ ಕಾಣಬೇಕು ಅಂದಾಗ ಮಾತ್ರ ಎಲ್ಲಾ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರದಲ್ಲಿ ಹಿರೇಮಠ ಸಂಸ್ಥಾನ ಬೇಮಳಖೇಡ ಗೋರಟಾದ ಡಾ. ರಾಜಶೇಖರ ಶಿವಾಚಾರ್ಯರು ಜಗದ್ಗುರು ರೇಣುಕಾಚಾರ್ಯರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮೇಕರ ತಡೊಳದ ಪೀಠದ ರಾಜೇಶ್ವರ ಶಿವಚಾರ್ಯರು, ರೇಣುಕಾಚಾರ್ಯರ ಜಯಂತಿ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಸಮಾಜದ ಮುಖಂಡರಾದ ಸಿದ್ರಾಮಯ್ಯ ಸ್ವಾಮಿ, ಈಶ್ಚರ ಸಿಂಗ ಠಾಕೂರ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ವಾಲಿ, ವೈಜಿನಾಥ ಕಮಠಾಣೆ, ಜಗದೀಶ ಖೂಬಾ, ಬಿ.ಜಿ ಶೇಟಕಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.