ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ರೇಣುಕರು

ಶಹಾಪುರ:ಮಾ.6:ಸನಾತನ ವೀರಶೈವ ಧರ್ಮ ಸಂಸ್ಥಾಪನೆ ಮಾಡಿ ಜಗತ್ತಿಗೆ ದಶಸೂತ್ರಗಳ ಮೂಲಕ ಸಿದ್ದಾಂತ ಶಿಖಾಮಣಿ ಧರ್ಮಗ್ರಂಥವನ್ನು ನೀಡಿದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸರಕಾರದ ವತಿಯಿಂದ ಆಚರಿಸುತ್ತಿರುವುದು ಸ್ತ್ಯತ್ಯಾರ್ಹವಾಗಿದೆ ಎಂದು ನಗರದ ಗುಂಬಳಾಪುರ ಮಠದ ಪೂಜ್ಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸರಕಾರದ ಆದೇಶದಂತೆ ಪ್ರತಿ ಫಾಲ್ಗುಣ ಶುದ್ಧ ತ್ರಯೋದಶಿಯಂದು(ಈ ಬಾರಿ ಮಾ.5) ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆಯನ್ನು ತಾಲೂಕಾಡಳಿತದಿಂದ ಸರಳವಾಗಿ ಕಚೇರಿಯಲ್ಲಿ ಆಯೋಜಿಸಿದ್ದನ್ನು ಪೂಜೆ ನೆರವೇರಿಸಿ ಮಾತನಾಡಿದರು.
ಇದೇ ಪ್ರಥಮ ಬಾರಿಗೆ ಸರಕಾರದಿಂದ ಜಯಂತ್ಯುತ್ಸವ ಆಚರಿಸುತ್ತಿರುವುದರಿಂದ ಸರಳವಾಗಿ ಆಯೋಜಿಸಲಾಗಿದ್ದು ಮುಂದಿನ ದಿನಗಳಲ್ಲಿ ಜಯಂತ್ಯುತ್ಸವವನ್ನು ಹಬ್ಬದಂತೆ ಸಕಲರು ಸೇರಿ ಆಚರಿಸುವಂತಾಗಬೇಕು ಎಂದರು.ಫಕೀರೇಶ್ವರ ಮಠದ ಪೂಜ್ಯ ಗುರುಪಾದಸ್ವಾಮಿಗಳು,ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಲ್ಲಣ್ಣ ಸಾಹು ಮಡ್ಡಿ ಉಪಾಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ,ಡಾ.ಚಂದ್ರಶೇಖರ ಸುಬೇದಾರ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಭಾರಿ ತಹಸೀಲ್ದಾರ್ ಸೇತು ಮಾಧವ್ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷ ರಾಯಪ್ಪಗೌಡ ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನಯ್ಯಸ್ವಾಮಿ ಸಾವುರು ಸ್ವಾಗತಿಸಿದರು. ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಡಾ.ಎಂ.ಪಿ.ಹಿರೇಮಠ,ಯುವ ಅಧ್ಯಕ್ಷ ವಿಜಯಕುಮಾರ ಸ್ಥಾವರಮಠ,ಉಪಾಧ್ಯಕ್ಷ ಸಿದ್ದಯ್ಯಸ್ವಾಮಿ ಹಳಿಪೇಟ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಶಂಭುಲಿಂಗ ಗೋಗಿ,ಶಿವರಾಜ ದೇಶಮುಖ,ಸಿದ್ದಲಿಂಗಣ್ಣ ಆನೆಗುಂದಿ,ನಂದಣ್ಣ ಮುಡಬೂಳ,ಬಸವರಾಜ ಹಿರೇಮಠ,ಶರಣು ಗದ್ದುಗೆ, ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರು,ಸಣ್ಣ ನಿಂಗಣ್ಣ ನಾಯ್ಕೋಡಿ,ನಗರಸಭೆ ಸದಸ್ಯ ಮಲ್ಲಿಕಾರ್ಜುನಸ್ವಾಮಿ ಗಂಗಾಧರಮಠ,ರೇವಣಸಿದ್ದಯ್ಯ ಡೆಂಗಿಮಠ,ಬಸ್ಸಯ್ಯಸ್ವಾಮಿ,ದೊಡಯ್ಯಸ್ವಾಮಿ ಶಾರದಹಳ್ಳಿ,ಶ್ರೀನಾಥ ಸ್ಥಾವರಮಠ,ರಾಜು ರುಮಾಲಮಠ,ಕಾರ್ತಿಕ ರುದ್ರಾಪುರಮಠ,ರಾಜು ಬೋಳಾರಿ ಸೇರಿದಂತೆ ನಗರದ ವೀರಶೈವ ಲಿಂಗಾಯತ ಸಮುದಾಯದ ಗಣ್ಯರು,ಯುವಕರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.