(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ನಗರದ ಸಕ್ಕರೆ ಕರಡೀಶ ಪ್ರಸಾದ ನಿಲಯದ ಆವರಣದಲ್ಲಿರುವ ವೀರಶೈವ ತರುಣ ಸಂಘದ ಕಛೇರಿಯಲ್ಲಿ ಸಂಘಕ್ಕೆ ಬರುವ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿಯನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನಂದೀಶ್ ಮಠಂ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು. ನಗರ ಮತ್ತು ಗ್ರಾಮೀಣ ವಲಯದಿಂದ 15 ಜನ ಕಾರ್ಯಕಾರಿ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂದೀಶ್ ಮಠಂ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾಗಿ ಬಜಾರದ ಬಸವರಾಜ್, ಕಾರ್ಯದರ್ಶಿಯಾಗಿ ಬಾಡದ ಬದ್ರಿನಾಥ, ಸಹಕಾರ್ಯದರ್ಶಿಯಾಗಿ ಹೆಚ್.ಮಲ್ಲಿಕಾರ್ಜುನ, ಖಜಾಂಚಿಯಾಗಿ ಎಸ್.ಪಿ.ಜಗದೀಶ್, ಅಧೀಕ್ಷಕರಾಗಿ ಟಿ.ಶಿವರಾಜ್, ಹಾಸ್ಟೆಲ್ ನ ವಾರ್ಡ್ ನ ಆಗಿ ಎಂ.ತಿಮ್ಮಾರೆಡ್ಡಿ, ಸಹ ವಾರ್ಡ್ ನ ಆಗಿ ಸವಿನಂದನ್ ಜಿ.ಎಂ, ಕಟ್ಟಡ ಸಮಿತಿಗೆ ಮೇಟಿ ದಿವಾಕರ್ ಗೌಡ, ಪಿ.ಬಸವರಾಜ, ಸಾಂಸ್ಕೃತಿಕ ವೇದಿಕೆಗೆ ಮಠಂ ಶಿವಲಿಂಗಯ್ಯ ಶಾಸ್ತ್ರಿ, ಕೆ.ಎಂ.ಷಮ್ಮುಖ, ಮುಕ್ತೇಶ್ವರ ದೇವಸ್ಥಾನಕ್ಕೆ ಸಿ.ಲೋಕೇಶ್, ಸಂತೋಷ್ ಕುಮಾರ್ ಬಿ, ಹಾಗೂ ಕಗ್ಗಲು ಭೂಮಿ ನಿರ್ವಾಹಣೆಗೆ ಎನ್.ಸಂತೋಷ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಭೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ನಂದೀಶ್ ಅವರು ಸಂಘವನ್ನು ಮತ್ತಷ್ಟು ಸಂಘಟಿತವಾಗಿ ಹಾಗೂ ಸಮಾಜ ಮುಖಿಯಾಗಿ ಕೊಂಡೊಯ್ಯಲು ಎಲ್ಲಾ ಹಿರಿ-ಕಿರಿಯ ಸದಸ್ಯರ, ಮುಖಂಡರ ಸಹಕಾರದಿಂದ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.