ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘ ಉದ್ಘಾಟನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಮಾ.05  ಪಟ್ಟಣದ ವೀರಶೈವ ಕಲ್ಯಾಣ ಮಂಟಪ ದಲ್ಲಿ  ಶನಿವಾರ ವೀರಶೈವ ಜಂಗಮ ಆರ್ಚಕ ಮತ್ತು ಪುರೋಹಿತರ ಸಂಘವನ್ನು ಕ್ಷೇತ್ರದ ಶಾಸಕ ಎಸ್ .ಭೀಮನಾಯ್ಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಮಾಜದ ಯಾವುದೇ ಕಾರ್ಯಕ್ರಮವನ್ನು  ವೀರಶೈವ ಜಂಗಮರ. ಕೈಯಿಂದ ಪ್ರಾರಂಭ ಮಾಡಿಸಿದರೆ ಅದು ಸಂಸ್ಕಾರದಿಂದ  ಕೂಡಿದ್ದು ಶ್ರೇಷ್ಠ ವಾಗಿರುತ್ತದೆ. ಅಲ್ಲದೇ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ.
ವೀರಶೈವ ಸಮಾಜಕ್ಕೆ ಜಂಗಮರ ಕೊಡುಗೆ ಅಪಾರ ವಾಗಿದೆ. ಸಮಾಜವು ಶೈಕ್ಷಣಿಕ. ಧಾರ್ಮಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು. ನಿಮ್ಮ  ಬೇಡಿಕೆಗಳಿಗೆ ನಾನು ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೇನೆ. ಇದೇ ವೀರಶೈವ ಜಂಗಮ ಸಮಾಜದ ಮುಖಂಡರಾಗಿದ್ದವರು, ನನಗೆ ರಾಜಕೀಯ ವಾಗಿ ನೆಲೆ ನಿಲ್ಲುವಂತೆ ಮಾಡಿದ್ದು ಸನ್ಮಾನ್ಯ ದಿ.ಎಂಪಿ ಪ್ರಕಾಶ್ ಸಾಹೇಬರು, ಮತ್ತು ಅವರ ಕುಟುಂಬದವರನ್ನು ಎಂದೆಂದಿಗೂ ಮರೆಯುದಿಲ್ಲ.
ಜಂಗಮ ಸಮುದಾಯ ಭವನ ನಿರ್ಮಾಣಕ್ಕೆ  ನಿವೇಶನ. ಹಾಗೂ  10 ಲಕ್ಷರೂ ಅನುದಾನ. ನೀಡಲಾಗುವುದು. ವೀರಶೈವ  ಕಲ್ಯಾಣ ಮಂಟಪಕ್ಕೆ ಈಗಾಗಲೇ 24 ಲಕ್ಷ ನೀಡಲಾಗಿದೆ ಇನ್ನೂ 60 ಲಕ್ಷ ಹಣ ಜಮೆ ಆಗಿದೆ,  ಇದಲ್ಲದೆ ಮುಂದಿನ ದಿನಗಳಲ್ಲಿ  ನಿಮ್ಶ ಎಲ್ಲರ ಆಶೀರ್ವಾದ ಇದ್ದರೇ   ಶಾಸಕರ ಅನುದಾನದಲ್ಲಿ 1 ಕೋಟಿ ಅನುದಾನವನ್ನು ಕೂಡ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಮಾಜದಲ್ಲಿ  ಜಂಗಮ ಸಮಾಜದ ಪಾತ್ರ ಕುರಿತು  ವೇದ ಮೂರ್ತಿ ಬಸವರಾಜ ಶಾಸ್ತ್ರಿಗಳು ಮಾತನಾಡಿದರು.
ಉದ್ಘಾಟನೆ ಕಾರ್ಯಕ್ಕೂ ಮುನ್ನ  ರೇಣುಕಾ ಚಾರ್ಯರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಚಿಕ್ಕ ಮಕ್ಕಳು ಛದ್ಮವೇಶ ಧರಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಸ್ವಾಮೀಜಿ, ಶಂಕರ ಸ್ವಾಮೀಜಿ, ಹನಸಿ ಮಠದ ಶಂಕರ ಸ್ವಾಮೀಜಿ, ನಾಗತಿ ಬಸಾಪುರದ ಗಿರಿರಾಜ ಹಾಲ ಸ್ವಾಮೀಜಿ,  ಎಂಪಿ ಕೊಟ್ರೇಶ್, ಸಮಾರಂಭದಲ್ಲಿ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಒಎಂ. ಸುಭಾಷಚಂದ್ರಯ್ಯ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.  ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ,  ತಾಲ್ಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ಸೊನ್ನದ ವೀರಭದ್ರಯ್ಯ,  ಜ್ಞಾನೇಶ್ವರ ಯ್ಯ, ನಾಗಯ್ಯ,  ಇತರರಿದ್ದರು. ಶಾರದ ಮಜುನಾಥ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹೆಚ್ಎಂ. ಚೆನ್ನವೀರಯ್ಯಸ್ವಾಮಿ,  ಸ್ವಾಗತಿಸಿದರು. ಬ್ಯಾಲಾಳ ಕರಿಬಸವನಗೌಡ.ನಿರೂಪಿಸಿದರು.