
ಬಳ್ಳಾರಿ, ಆ.15: ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದಲ್ಲಿ 76ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವೀ.ವಿ.ಸಂಘದ ಸಹಕಾರ್ಯದರ್ಶಿಗಳು ಹಾಗೂ ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ದರೂರು ಶಾಂತನಗೌಡ ರವರು ಮಾತನಾಡುತ್ತ ದೇಶದ ಸ್ವಾತಂತ್ರ್ಯವನ್ನು ನಾವು ತ್ಯಾಗ, ಬಲಿದಾನದ ಮೂಲಕ ಪಡೆದುಕೊಂಡಿದ್ದೇವೆ. ಲಕ್ಷಾಂತರ ವೀರಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಭಾರತೀಯರು ಎಲ್ಲರೂ ಸ್ವಾತಂತ್ರ್ಯತೆ ಸಮೃದ್ಧ ಜೀವನವನ್ನು ನಡೆಸಲಿ ಎಂದು ಇಂತಹ ಸಮೃದ್ಧ ನಾಡಿನಲ್ಲಿ ನಾವೆಲ್ಲರೂ ಇದ್ದೇವೆ. ಸ್ವಾತಂತ್ಯದ ಅಶೋತ್ತರಗಳನ್ನು ನಾವೆಲ್ಲರು ಸಾಕಾರಗೊಳಿಸೋಣ “ಎಲ್ಲಕ್ಕಿಂತ ದೇಶ ಮೊದಲು” ಎಂಬ ತತ್ವದೊಂದಿಗೆ ನಮ್ಮ ಪೂರ್ವಜರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶಕಟ್ಟುವ ಕಾಯಕದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಒಂದೇ ಮಾತರಂ ನಮ್ಮ ಮಂತ್ರವಾಗಲಿ ಎಂದು ನುಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ.ಶ್ರೀ.ಶ್ರೀ ಷಟ್‍ಸ್ಥಲ ಬ್ರಹ್ಮ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಪುರವರ್ಗ ಹಿರೇಮಠ ಜಂಗಮರ ಹೊಸಳ್ಳಿ ಗಡಿನಾಡು ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀ.ವಿ.ಸಂಘದ ಕೋಶಾಧಿಕಾರಿಗಳಾದ ಗೋನಾಳ ರಾಜಶೇಖರ ಗೌಡ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರುಗಳಾದ ಕರೇಗೌಡರು, ಶಿವಾ ರಮೇಶ್, ಗಂಗಾವತಿ ವೀರೇಶ್, ಕರೇಗೌಡರು, ಡಿ.ವಿಶ್ವನಾಥ, ಎಸ್.ವೆಂಕಟೇಶ ಗೌಡ, ಪಟ್ಟಣಶೆಟ್ಟಿ ಪಂಪಾಪತಿ ಇವರು ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಮನೋಹರ್, ಮಾತನಾಡುತ್ತಾ ಸ್ವಾತಂತ್ರ್ಯನಂತರ ದೇಶ ಹಲವಾರು ರಂಗಗಳಲ್ಲಿ ಉನ್ನತಿಯನ್ನು ಸಾಧಿಸಿದೆ. ಮತ್ತು ಈ ದಿಕ್ಕಿನಲ್ಲಿ ಭವ್ಯ ಭಾರತದ ಪ್ರಜೆಗಳಾದ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ವೀರಶೈವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಸ್.ಗೌತಮ್‍ರವರು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿ, ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಜಿ.ಶ್ಯಾಮೂರ್ತಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.