ವೀರಶೈವ ಕಾಲೇಜು:ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ರಾಯಚೂರು.ಮಾ.೨೨-ಜಿಲ್ಲಾ ವೀರಶೈವ ಸಮಾಜದ ಸಿರವಾರ ಚುಕ್ಕಿ ಸುಗುಣಮ್ಮ ಅಮಲೇಶಪ್ಪ ಪದವಿಪೂರ್ವ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ
೨೦೨೦-೨೧ ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ , ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಿಶೇಷ ಭಾಷಣಕಾರರಾಗಿ ಆಗಮಿಸಿದ್ದ ರಮೇಶಬಾಬು ಯಾಳಗಿ ಸಾಹಿತಿಗಳು ಮಾತನಾಡುತ್ತಾ ಸಾಧನೆ ಎಂಬುದು ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ,ನಿನ್ನ ಏಳಿಗೆಯ ಶಿಲ್ಪಿ ನೀನೆ ಆಗಬೇಕು , ಸಂಕಷ್ಟಗಳನ್ನು ಎದುರಿಸಿ ಧೈರ್ಯದಿಂದ ಮುನ್ನುಗಿದಾಗ ಸಾಧನೆ ಸಾಧ್ಯ.ಸಕಾರಾತ್ಮಕ ಮನೋಭಾವನೆಯ ಸಾಧನೆಗೆ ಸೋಪಾನ ಎಂದು ಹೇಳಿದರು.
ಈ ಸಂದರ್ಭದಲ್ಲಿಅಧ್ಯಕ್ಷತೆಯನ್ನು ಶರಣಭೂಪಾಲ ನಾಡಗೌಡ,ಗಾರಲದಿನ್ನಿ ಸಿದ್ಧನಗೌಡ,ಎಚ್.ಗುರುನಾಥರೆಡ್ಡಿ,ವಿರೇಂದ್ರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ವೀರಶೈವ ಕಾಲೇಜು:ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ