ವೀರಶೈವ ಅಭಿವೃದ್ದಿ ನಿಗಮ ಸ್ಥಾಪನೆಗೆ ಹರ್ಷ

ವಾಡಿ:ನ.20: ವೀರಶೈವ ನಿಗಮ ಸ್ಥಾಪನೆಗೆ ಕಾರಣಿಭೂತರಾದ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಸಿಎಂನವರು ಸಮುದಾಯದ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದು ಸಮಾಜದ ಯುವ ಮುಖಂಡ ಈಶ್ವರ ಬಾಳಿ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದಲ್ಲಿ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ರಚನೆಗೆ ಆದೇಶ ಮಾಡಿದಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ತಾಲ್ಲೂಕ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕೇವಲ ನಿಗಮ ಮಾಡಿದರಷ್ಟೆ ಸಾಲದು ಹೆಚ್ಚಿನ ಅನುದಾನವನ್ನು ನೀಡುವುದರ ಮೂಲಕ ಸಮುದಾಯದ ಬಡ ಜನರಿಗಾಗಿ ಅನುಕೂಲವಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ವಿಜಯೋತ್ಸವದಲ್ಲಿ ಮಾಜಿ ಮಂಡಲ ಬಿಜೆಪಿ ಅಧ್ಯಕ್ಷ ಅಣ್ಣಾರಾವ ಬಾಳಿ, ವೀರಶೈವ ಲಿಂಗಾಯತ ಯುವ ವೇದಿಕೆ ತಾಲ್ಲೂಕಧ್ಯಕ್ಷ ಮಹೇಶ ಬಾಳಿ, ಗುಂಡುಗೌಡ ಪಾಟೀಲ ಇಂಗಳಗಿ, ಅವಿನಾಶ ಅರಳಿ, ಮಹದೇವ ಸ್ವಾಮಿ, ಆನಂದ ಅಳ್ಳೊಳ್ಳಿ, ಜಗದೇವ ಕೆರಳ್ಳಿ, ಶಾಂತು ಬಾಳಿ, ಈರಣ್ಣ ಕಲ್ಯಾಣಿ, ಬಸವರಾಜ ಕೆರಳ್ಳಿ, ವಿಶ್ವ ಭೈರಾಮಡಗಿ, ವಿರೇಶ ಕಲ್ಲೂರಕರ್, ರಾಚಯ್ಯ ವಲಂಡಿ, ಯಶವಂತ ಅಳ್ಳೊಳಿ, ರಾಜು ಸೂಲಹಳ್ಳಿ, ಮಹಾಂತೇಶ ಬಾಳಿ, ಶಿವಾನಂದ ಕೋರಿ, ಅಭಿಲಾಷ ಹೌದೆ, ಸಿದ್ದಲಿಂಗ ಮದಗುಣಕಿ, ಶಶಿಕಾಂತ ಕೆಳಮನಿ, ವಿಶ್ವನಾಥ ದೇಸಾಯಿ, ಮಲ್ಲು ಸಂಗಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶರಣು ಜ್ಯೋತಿ ನಿರೂಪಿಸಿ ವಂದಿಸಿದರು.