ವೀರಭದ್ರ ಸ್ವಾಮಿಗೆ ನೂತನ ರಥ ಲೋಕಾರ್ಪಣೆ

ದಾವಣಗೆರೆ, ಮಾ. 17; ಎಲ್ಲಾ ಸನಾತನ ಧರ್ಮದ ಪರಂಪರೆಯಲ್ಲಿ ರಥವನ್ನು ಮಾಡಿ ಅಲ್ಲಿ ದೇವರ ಮೂರ್ತಿ ಪ್ರತಿಷ್ಟಾಪನೆಯನ್ನು ಮಾಡಿ ನಾವೆಲ್ಲರೂ ಭಕ್ತಿಯನ್ನು ಸಮರ್ಪಣೆ ಮಾಡುತ್ತೇವೆ. ಶರಣರ ಭಾವನೆಯಲ್ಲಿ ದೇಹವೆಂಬ ನಾವು ತೇರನ್ನು ಮಾಡಬೇಕಾಗುತ್ತದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರ ಮಹಾಸ್ವಾಮೀಜಿ ಹೇಳಿದರು.ನಗರದ ಹಳೇ ಪೇಟೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯಿಂದ ಶುಕ್ರವಾರ ಸುಮಾರು 17 ಲಕ್ಷ್ ರೂ.ಗಳಲ್ಲಿ ನೂತನವಾಗಿ ನಿರ್ಮಿತವಾದ ರಥವನ್ನು ಲೋಕಾರ್ಪಣೆ ಮಾಡಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕಳಸವನ್ನು ಮಸ್ತಕದಲ್ಲಿಟ್ಟುಕೊಂಡು ತೇರಿಗೆ ಹೇಗೆ ಕಳಸ ಇಡುತ್ತೇವೆಯೋ ಹಾಗೆ ಮಸ್ತಕದಲ್ಲಿ ಜ್ಞಾನವೆಂಬ ತೇರನ್ನು ಎಳೆಯಬೇಕು. ಸುಮ್ಮನೆ ಅಂತಿAತ ತೇರನ್ನು ಎಳೆದು, ಒಂದು ಮುರ್ತಿಯನ್ನು ಇಟ್ಟು ತೇರನ್ನು ಎಳೆಯುವುದಲ್ಲ. ಈ ದೇಹವೆಂಬ ಹೃದಯದಲ್ಲಿ ಪರಮಾತ್ಮನ ವಾಸಸ್ಥಳದಲ್ಲಿ ಚೈತನ್ಯವಾದಂತಹ ಗುರಿ ಇಟ್ಟುಕೊಂಡು ತೇರನ್ನು ಎಳೆಯಬೇಕು ಎಂದರು.ನಮ್ಮ ಸನಾತನ ಪದ್ಧತಿ ಹೇಗೆ ಇದೆ ಎಂದರೆ ಕೇವಲ ಕಾಷದಿಂದ ಮಾಡಿದ ತೇರು ಪವಿತ್ರ ಆಗುವುದಿಲ್ಲ. ಅದಕ್ಕೆ ಚೈತನ್ಯ ಕೊಡಬೇಕೆಂದರೆ ಜಂಗಮ ಮೂರ್ತಿಯನ್ನು ತೇರಿನಲ್ಲಿ ಕೂರಿಸಿ ತೇರನ್ನು ಎಳೆಯುವಂತಹ ಪದ್ಧತಿ ರಾಜ್ಯದ ಎಲ್ಲಡೆ ಇದೆ. ಹಾಗೆ ಆತ್ಮ ಜ್ಯೋತಿ ಎಂಬ ತೇರನ್ನು ಹೃದಯದಲ್ಲಿ ಇಟ್ಟುಕೊಂಡು ತೇರನ್ನು ಎಳೆದರೆ ಜೀವಾತ್ಮ ಎಂಬ ಗುರಿ ಮುಟ್ಟಲು ದಾರಿ ದೀಪವಾಗುತ್ತದೆ. ಎಲ್ಲರೂ ಸನ್ನಡತೆ, ಸದಾಚಾರ, ಸದ್ಗುಣಗಳಿಂದ ಈ ತೇರನ್ನು ಎಳೆಯುವಂತಹ ಪರಿಪಾಠವನ್ನು ರೂಢಿಸಿಕೊಳ್ಳಿರಿ ಎಂದು ಭಕ್ತರಿಗೆ ಕರೆ ನೀಡಿದರು.ಶರಣರು ಮಾಡಿದ ಅನುಭಾವದ ಅಡಿಗೆ ನಮಗೆ ದಾರಿ ದೀಪವಾಗುತ್ತದೆ. ದಾರಿದೀಪವಾದ ಸನ್ನಡತೆ ಸದ್ಗುಣಗಳನ್ನು ಹೃದಯದಲ್ಲಿ ನಿಮ್ಮ ಮಕ್ಕಳಲ್ಲಿ, ನಿಮ್ಮ ಮನೆಗಳಲ್ಲಿ ಬೆಳಗುವಂತಹ ವಿಚಾರದಾರೆಗೆ ಬನ್ನಿರಿ. ಎಲ್ಲರೂ ಅಂಗದ ಮೇಲೆ ಲಿಂಗವನ್ನು ಕಟ್ಟಿಕೊಳ್ಳಿ, ಪೂಜೆ, ಪುನಸ್ಕಾರ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಆಚಾರ, ವಿಚಾರ, ಸಂಸ್ಕೃತಿಯನ್ನು ಕಲಿಸಿದರೆ ಸಮಾಜ ಮುಂದೆ ಬರುತ್ತದೆ. ಇಲ್ಲದಿದ್ದರೆ ಸಮಾಜ ಅನಾಥವಾಗುತ್ತದೆ. ನಿಮ್ಮ ಮಕ್ಕಳ ಬಗ್ಗೆ ಜಾಗೃತರಾಗಿರಿ. ನಿಮ್ಮ ಮಕ್ಕಳಿಗೆ ಓದಿನ ಜೊತೆಗೆ ಉತ್ತಮ ಸಂಸ್ಕಾರ ನೀಡಿ. ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಿ. ಅವರನ್ನು ಸಮಾಜದ ಒಬ್ಬ ಸತ್ಪçಜೆಗಳನ್ನಾಗಿ ಬೆಳೆಸಿರಿ. ನಿಮ್ಮ ದೇಹವೆಂಬ ರಥವನ್ನು ಹೊತ್ತು ತಿರುಗಲು ಶಕ್ತಿ ಬರಬೇಕೆಂದರೆ ನಿಮ್ಮಲ್ಲಿ ಜ್ಞಾನ ಬರಬೇಕು. ಜ್ಞಾನವನ್ನು ಸಂಪಾದನೆ ಮಾಡುವ ಗುರಿ ನಿಮ್ಮ ಬರಬೇಕು ಎಂದು ತಿಳಿಸಿದರು.