ವೀರಭದ್ರೇಶ್ವರ ದೇವಸ್ಥಾನದ ಶಿಖರ ನಿರ್ಮಾಣದ ಶಂಕುಸ್ಥಾಪನೆ

ಕಲಬುರಗಿ,ನ.17: ಕಮಲಾಪುರ ತಾಲೂಕಿನ ಸಿರಗಾಪುರ ಗ್ರಾಮದ ಆರಾಧ್ಯ ದೈವ, ಅವತಾರಿ ಪುರುಷ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾದ ನೂತನ ಮಾಲಗಂಬಾವನ್ನು ಮುತ್ಯಾನ ಬಬಲಾದ ಶ್ರೀಮಠದ ಪೂಜ್ಯ, ಕೃಷಿ ಋಷಿ ಗುರುಪಾದಲಿಂಗ ಮಹಾಶಿವಯೋಗಿಗಳು, ಅವರಾದ(ಬಿ)ಯ ಚರಂತಿಮಠದ ಪೂಜ್ಯ ಮರುಳಸಿದ್ಧ ಶಿವಾಚಾರ್ಯರು ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ ದೀಪಾವಳಿ ಹಬ್ಬದಂದು ಚಾಲನೆ ನೀಡಿದರು. ಇದೇ ವೇಳೆಗೆ ದೇವಸ್ಥಾನದ ಶಿಖರ ಹಾಗೂ ದ್ವಾರಬಾಗಿಲು ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.
ಸಹಸ್ರಾರು ಭಕ್ತರು ಆರಾಧಿಸುವ ಶ್ರೀವೀರಭದ್ರೇಶ್ವರರು ಭಕ್ತರ ಇಷ್ಟಾರ್ಥ ಕರುಣಿಸುವ ಸಿದ್ಧಿಪುರುಷ. ಈ ದಿಸೆಯಲ್ಲಿ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿ ಹೊರಹೊಮ್ಮಬೇಕಿದೆ. ಈ ನಿಟ್ಟಿನಲ್ಲಿ ಸದ್ಭಕ್ತರು ಸಹ ತನು, ಮನು, ಧನದಿಂದ ಅಮೋಘ ಸೇವೆ ಸಲ್ಲಿಸಬೇಕು ಎಂದು ದೇವಸ್ಥಾನದ ಕಮೀಟಿ ಪದಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಬುರಾವ ಪಾಟೀಲ್, ಪ್ರಮುಖರಾದ ಶಿವಕುಮಾರ ಪಸಾರ್, ಚನ್ನವೀರ ಸಲಗರ, ರಾಜಕುಮಾರ ಮಂಠಾಳೆ, ವಿರಣ್ಣ ಕೊಟ್ಟರಗಿ, ಶ್ರೀಮಂತ ನಿಪ್ಪಾಣಿ, ಸಂಗಣ್ಣ ಚಿಂಚನಸೂರ, ಗುಂಡಪ್ಪ ಕುದಮೂಡ, ಗುಂಡಪ್ಪ ಸಿರಾಡೋಣ, ಈರಣ್ಣ ಕುಂಬಾರ, ಮಲ್ಲಯ್ಯ ಸ್ವಾಮಿ, ಚಿತ್ರಶೇಖರ ಬಿರಾದಾರ್, ಮರುಗೇಪ್ಪ ಬಿರಾದಾರ್, ಸಂತೋಷ ಕೊಟ್ಟರಗಿ, ಮಲ್ಲೇಶಪ್ಪ ಪೂಜಾರಿ, ಸುಭಾಷ ನಾಟೀಕಾರ್, ಭೀಮರಾಯ ನಾಟೀಕಾರ್, ಮಲ್ಲಿಕಾರ್ಜುನ ಪೂಜಾರಿ, ಶಶಿ ಬಿರಾದಾರ್, ಸಂತೋಷ ಪೂಜಾರಿ, ರವಿ ಬಿರಾದಾರ್, ರವಿ ನಾಟೀಕಾರ್, ರವಿ ಪೂಜಾರಿ, ಅರ್ಚಕ ಗುರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.