ವೀರಭದ್ರೇಶ್ವರ ತೊಟ್ಟಿಲು ಕಾರ್ಯಕ್ರಮ

ಕಲಬುರಗಿ ಸೆ 1: ಇಲ್ಲಿನ ಸಂಗತರಾಸ ವಾಡಿಯ ಬಡಾವಣೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶೀಲವಂತ ಅಕ್ಕಸಾಲಿ ಸಮಾಜದ ವತಿಯಿಂದ ವೀರಭದ್ರೇಶ್ವರ ಉದ್ಭವ(ಜಯಂತಿ) ಮಹೋತ್ಸವ ನಡೆಯಿತು.
ವೀರಭದ್ರೇಶ್ವರ ದೇವರಿಗೆ ತೊಟ್ಟಿಲು ಕಾರ್ಯಕ್ರಮ, ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಶೀಲವಂತ ಸಮಾಜದ ಅಧ್ಯಕ್ಷ ರಾಚಣ್ಣ ಮುದಡಗಿ ಶೀಲವಂತ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಶೀಲವಂತ ಹಾಗೂ ಶೀಲವಂತ ಸಮಾಜದ ಮಹಿಳಾ ಸದಸ್ಯರಾದ ಸರಸ್ವತಿ ಸಲಗರ, ಜ್ಯೋತಿ ಸೋಮಪುರ, ಚಂದ್ರಕಲಾ ಆರ್. ಮುದಡಿ ಅವರ ನೇತೃತ್ವದಲ್ಲಿ ವೀರಭದ್ರೇಶ್ವರ ಜಯಂತಿ ಅದ್ಧೂರಿಯಾಗಿ ಜರುಗಿತು.