ವೀರಭದ್ರೇಶ್ವರ ಜಾತ್ರೆ
ಕಮ್ಮರಚೇಡಿನಲ್ಲಿ ಸಪ್ತಭಜನೆ ಆರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.30:  ತಾಲೂಕಿನ  ಕಮ್ಮರಚೇಡು ಗ್ರಾಮದಲ್ಲಿ ಎ 7 ರಂದು ನಡೆಯುವ ವೀರಭದ್ರೇಶ್ವರ ಅಗ್ನಿ ಕುಂಡ ಮತ್ತು ಜಾತ್ರೆ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ  ಇಂದು ಬೆಳಿಗ್ಗೆ ಸಪ್ತ ಭಜನೆ ಆರಂಭವಾಗಿದ್ದು ಎ.6 ರ ಬೆಳಿಗ್ಗೆ ವರೆಗೆ ನಡೆಯಲಿದೆ.
ಕಮ್ಮರಚೇಡು, ಗೋವಿಂದವಾಡ, ಶಂಕರಬಂಡೆ, ಕಲ್ಲುಹೊಳೆ, ಉಂಡುಬಂಡ, ಬೊಬ್ಬಕುಂಟ, ಜಾಲಿಹಾಳ್, ದರ್ಗಾ ಹೊನ್ನುರು, ತಾಳೂರು, ಬಸರಕೋಡು, ಕಲ್ಲುಕುಂಟನಹಾಳ್, ಎಂ.ಗೋನಾಳ್, ಬೊಮ್ಮನಹಾಳ್, ಪಾಲ್ತೂರು, ಇಬ್ರಾಹಿಂಪುರ, ಉಬ್ಬಳಗಂಡಿ, ಕೆ.ವೀರಾಪುರ, ರಾಜಾಪುರ, ಕುಂಟನಾಳ್, ಕೊಂಚಿಗೇರಿ, ಕಗ್ಗಲ್ಲು ಮೊದಲಾದ ಗ್ರಾಮಗಳ  28 ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.