
ನರೇಗಲ್ಲ,ಸೆ.16: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಬೆಳಿಗ್ಗೆ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆ, ವೀರಭದ್ರೇಶ್ವರ ಗುಗ್ಗಳ ಕಾರ್ಯಕ್ರಮವು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಪ್ರಸನ್ನಗೊಂಡಿತು.
ದೇವಸ್ಥಾನದ ಆವರಣದಿಂದ ಗುಗ್ಗಳ ಕೊಡ ಹೊತ್ತು ಭಕ್ತಾದಿಗಳು ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ಮೂರ್ತಿ ಇಟ್ಟುಕೊಂಡು ಮೆರವಣಿಗೆ ಸಾಗಿತು. ಗುಗ್ಗಳ ದೇವಸ್ಥಾನನದ ಹೊರಗಡೆ ಅಗ್ನಿ ಕುಂಡ ಹಾಕಲಾಗಿತ್ತು. ಪುರವಂತರು ಅಗ್ನಿ ಕುಂಡವನ್ನು ಹಾಯ್ದುಕೊಂಡು ಹೊದರು. ಖಡೆ, ಖಡೆ ಎಂಬ ಮಂತ್ರ ಮುಗಿಲು ಮುಟ್ಟಿತ್ತು. ಗುಗ್ಗಳೋತ್ಸವದ ಮೆರವಣಿಗೆಯು ಸಕಲ ವಾದ್ಯ ವೃಂದಗಳೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಣೇಶ ದೇವಸ್ಥಾನ, ಮಾರುತಿ ದೇವಸ್ಥಾನ ಮೂಲಕ ವೀರಣ್ಣನ ಪಾದಗಟ್ಟಿಯವರೆಗೆ ತುಲುಪಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು. ಸಾವಿರಾರು ಭಕ್ತರು ಗುಗ್ಗಳ ಕಾರ್ಯದಲ್ಲಿ ಭಕ್ತಿಯ ಪರಾಕಾಷ್ಟಯಲ್ಲಿ ಮಿಂದೆದ್ದರು.
ಮೈನವಿರೇಳಿಸುವ ಪುರವಂತಿಕೆ…
ಜಾತ್ರೆ ಅಂಗವಾಗಿ ನರೇಗಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪುರವಂತರು ಮಂಗಳವಾದ್ಯಗಲೊಂದಿಗೆ ದೇವರ ಮಹಿಮೆ, ಸಂಸ್ಕೃತಿ, ಧರ್ಮ ಸೇರಿದಂತೆ ತಮ್ಮ ವಿವಿಧ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿ ಖಡ್ಗ ಹಿಡಿದು ಝಳಪಿಸುತ್ತಾ ಜಾತ್ರಯಲ್ಲಿ ಸೇರಿದ್ದ ಜನರನ್ನು ಬೆರಗುಗೊಳಿಸಿ ತಮ್ಮ ಅದ್ಬುತ ಪುರವಂತಿಕೆ ಕಲೆ ಪ್ರದರ್ಶಿಸಿದರು.
ಅಸ್ತ ಸೇವೆಯ ಮೂಲಕ ಹರಿಕೆ ತಿರಿಸಿದ ಭಕ್ತರು :
ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಗುಗ್ಗಳ ಕಾರ್ಯದಲ್ಲಿ ಎಂಥವರ ಮೈಯನ್ನು ಜುಮ್ಮೆನಿಸುವ ರೀತಿಯಲ್ಲಿ ಭಕ್ತರು ಬಾಯಿಗೆ, ನಾಲಿಗೆಗೆ ಅಸ್ತ್ರ ವನ್ನು ಹಾಕಿಸಿಕೊಂಡು ಭಕ್ತಿಯ ಪ್ರದರ್ಶನ ನೀಡಿದರು.