ವೀರಭದ್ರಗೌಡ ಬಿಜೆಪಿ ಪಕ್ಷ ಸೇರ್ಪಡೆ

ಮಾನ್ವಿ,ಏ.೨೮- ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ, ಹಿರೇಕೋಟ್ನೆಕಲ್ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ವೀರಭದ್ರಗೌಡ ಬೊಗವತಿ ಮತ್ತು ಶಂಭನಗೌಡ ಮತ್ತು ಅವರ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಸಂಸದರು, ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವಿ ನಾಯಕ್ ನೇತೃತ್ವದಲ್ಲಿ ಇವರು ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬಿಜೆಪಿ ಪಕ್ಷ ಸೇರ್ಪಡೆಯಾದರು,
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ. ಬಿ. ವಿ ನಾಯಕ, ಬಂಡ ಕಾರ್ತಿಕ್ ರೆಡ್ಡಿ ಮಾನ್ವಿ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಬಂಡೇಶ ವಲ್ಕಂದಿನ್ನಿ ಮಾನ್ವಿ ಮಂಡಲ ಅಧ್ಯಕ್ಷರಾದ ಜಕ್ಕಲದಿನ್ನಿ ಮಲ್ಲಿಕಾರ್ಜುನ, ಮಾಜಿ ಶಾಸಕರಾದ ಗಂಗಾಧರ್ ನಾಯಕ್ ,ಬಸವನಗೌಡ ಬ್ಯಾಗವಾಟ್ ಟಿಎಪಿಎಂಸಿ ಅಧ್ಯಕ್ಷರಾದ ತಿಮ್ಮಾರೆಡ್ಡಿ ಗೌಡ, ವೀರೇಶ ನಾಯಕ ಬೆಟ್ಟದೂರು ಮಾಜಿ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ ಮಾನ್ವಿ ಹಾಗೂ ಬಿಜೆಪಿ ರಾಜ್ಯ ಎಸ್ ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಚಂದ್ರಕಾಲ ಸ್ವಾಮಿ, ನಾಗಲಿಂಗ ಸ್ವಾಮಿ ಉಮೇಶ್ ಸಜ್ಜನ್ ಹನುಮಂತಪ್ಪ ಗೌಡ ಶ್ರೀನಿವಾಸ್ ನಾಯಕ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.