ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ತಾಂತ್ರಿಕ ಮತ್ತು ಸಾಂಸ್ಕøತಿಕ ಉತ್ಸವ

ಕಲಬುರಗಿ:ಮೇ.25: ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಕೃಪಾರ್ಶೀವಾದದಿಂದ, ಸುರಪುರದ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಇದೇ ತಿಂಗಳ ಮೇ 29 ಮತ್ತು 30ನೇ ತಾರೀಖಿನಂದು ಎರಡು ದಿನಗಳ ಕಾಲ “ಜ್ಞಾನ ಮಂಥನ-2023” ಎಂಬ ತಾಂತ್ರಿಕ ಮತ್ತು ಸಾಂಸ್ಕøತಿಕ ಉತ್ಸವ ಏರ್ಪಡಿಸಲಾಗಿದೆ.
ಈ ಉತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಆಗಮಿಸುವರು. ಅಥಿತಿಗಳಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಹಾಗೂ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಜಂಟಿ ಕಾರ್ಯದರ್ಶಿ ಶ್ರೀ ದೊಡ್ಡಪ್ಪ ನಿಷ್ಠಿ ಉಪಸ್ಥಿತರಿರುವರು.
ಗೌರವ ಅಥಿತಿಗಳಾಗಿ ಬೆಂಗಳೂರಿನ ಆರ್. ವಿ ಕಾಲೇಜಿನ ಕರ್ನಲ್ ಈಶ್ವರ ದೊಡ್ಡಮನಿ, ವಿಎನ್‍ಇಸಿಯ ಆಡಳಿತ ಮಂಡಳಿ ಸದಸ್ಯ ಡಾ. ಚನ್ನಬಸವ ನಿಷ್ಠಿ, ವ್ಯಾಪಾರ ವಿಶ್ಲೇಷಕ ಅಭಿಷೇಕ ಕುಲಕರ್ಣಿ, ಕ್ಲೌಸ್ ಐಟಿ ಸಲೂಷನ್ಸನ ಅಮರ ಸುಲಗಂಟೆ ಆಗಮಿಸುವರು.
ಮರುದಿನ 30ರಂದು ಮುಖ್ಯ ಅಥಿತಿಗಳಾಗಿ ವಿಎನ್‍ಇಸಿಯ ಕಾರ್ಯದರ್ಶಿ ಅಡ್ವೋಕೆಟ್ ಶರಣಬಸವಪ್ಪ ನಿಷ್ಠಿ, ಕೆಕೆಸಿಸಿಐನ ಶಶಿಕಾಂತ ಪಾಟೀಲ ಆಗಮಿಸುವರು. ಗೌರವ ಅಥಿತಿಗಳಾಗಿ ಮಾಜಿ ಉಪಕುಲಪತಿ ಡಾ. ಎಸ್ ಎ ಪಾಟೀಲ, ವಿಎನ್‍ಇಸಿಯ ಮಾಜಿ ಪ್ರಾಚಾರ್ಯರಾದ ಪ್ರೊ. ಪಟ್ಟಣಶೆಟ್ಟಿ ಖಗೇಷನ್ ಹಾಗೂ ವಿಎನ್‍ಇಸಿಯ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಸಾಲಿ ಅಧ್ಯಕ್ಷತೆ ವಹಿಸುವರು.
ಈ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಇತರ ಪೂರ್ವನಿಯೋಜಿತ ಕಾರ್ಯಕ್ರಮಗಳು ಜರುಗುವವು.