‘ ವೀರಪುತ್ರ’ನಿಗೆ ಜ್ಯೂಡಾ ಸ್ಯಾಂಡಿ ಸಂಗೀತ

ಸಪ್ಲಿಮೆಂಟರಿ ಚಿತ್ರದ ಬಳಿಕ ನಿರ್ಮಾಪಕ ಗುರು ಬಂಡಿ‌ ಹಾಗೂ ನಿರ್ದೇಶಕ ಡಾ. ದೇವರಾಜ್‌ ಅವರ ಕಾಂಬಿನೇಶನ್ ನಲ್ಲಿ ‘ “ವೀರಪುತ್ರ” ಚಿತ್ರ ನಿರ್ಮಾಣವಾಗುತ್ತಿದೆ..
ವಿಜಯ್ ಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಪ್ರೋಮೊ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಯುವ ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸಂಗೀತ ನೀಡಲಿರುವ ಜ್ಯೂಡಾ ಸ್ಯಾಂಡಿ ಸಂಗೀತ ರಸಿಕರಿಗೆ ಮನೋರಂಜನೆಯ ರಸದೌತಣ ನೀಡುವುದಾಗಿ ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ” ವೀರಪುತ್ರ” ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.