ಬೀದರ್:ಜೂ.9: ಪ್ರತಿಭಾನ್ವಿತ ಕವಿ, ಸಾಹಿತಿಗಳು ಮತ್ತು ಲೇಖಕರನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ವೀರಲೋಕ ಬುಕ್ಸ್ ವತಿಯಿಂದ ಜೂನ್ 10 ಮತ್ತು 11 ರಂದು ಬೀದರ ನಗರದ ಅತಿವಾಳೆ ಸಾಂಸ್ಕøತಿಕ ಸಭಾಭವನ (ಕುಂಬಾರವಾಡ ಕಮಾನ ಹತ್ತಿರ) ಜರುಗಲಿರುವ ಕಥಾ ಕಮ್ಮಟ ಶಿಬಿರದಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಅವರು ಮನವಿ ಮಾಡಿದ್ದಾರೆ.
ಉತ್ತಮ ಬರಹಾಗರರು ಹಾಗೂ ಸಂಘಟಕರಾದ ವೀರಕಪುತ್ರ ಶ್ರೀನಿವಾಸ ಅವರು ಕಳೆದ ವರ್ಷ ಜೂನ್ 8 ರಂದು ವೀರಲೋಕ್ ಬುಕ್ಸ್ (ಇದು ಪುಸ್ತಕ ಪ್ರಪಂಚ) ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಒಂದೆ ವರ್ಷದಲ್ಲಿ 44 ಕೃತಿಗಳನ್ನು ಪ್ರಕಟಿಸಿ 32 ಸಾವಿರ ಓದುಗರ ಮನ ಗೆದ್ದಿದ್ದಾರೆ. ಕಥೆ, ಕವನ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ, ಪುರಸ್ಕಾರಗಳನ್ನು ನೀಡುವುದು, ಹೊಸ ವರ್ಷದ ಮಧ್ಯರಾತ್ರಿ 12 ಗಂಟೆಗೆ ಕನ್ನಡ ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಃಃಅ (ಬುಕ್ಸ್ ಬರ್ಗರ್ ಕಾಫಿ) ಎಂಬ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿ 30 ದಿನ 30 ಜನ ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಿ ಮತ್ತು ರಾಜ್ಯಾದ್ಯಂತ 300 ಪುಸ್ತಕ ಸ್ಟ್ಯಾಂಡಗಳನ್ನು ಸ್ಥಾಪಿಸಿ ಹೀಗೆ ಸಾಹಿತ್ಯಲೋಕದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿದ್ದಾರೆ.
ವೀರಲೋಕದ ವತಿಯಿಂದ ನಾಡಿನ ಹೆಸರಾಂತ ಸಾಹಿಗಳಿಂದ ಪುಸ್ತಕಗಳನ್ನು ಸಿದ್ದಪಡಿಸಿ ಜನರೆಗೆ ಸುಲಭವಾಗಿ ಪುಸ್ತಕಗಳು ಲಭ್ಯವಾಗುವಂತಹ ವಾತಾವರಣ ನಿರ್ಮಿಸಿದ್ದಾರೆ. ಇದರಡಿ ಕಳೆದ ವರ್ಷ ಬೀದರ ಜಿಲ್ಲೆಯಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾತೃಭೂಮಿ ಸಂಸ್ಥೆಯ ಸಹಯೋಗದೊಂದಿಗೆ ಹತ್ತು ಪುಸ್ತಕಗಳ ಮರು ಬಿಡುಗಡೆ ಕಾರ್ಯಕ್ರಮ ನಡೆದಿರುವುದು ಹೆಮ್ಮೆಯ ಸಂಗತಿ.
ಮುಂದುವರಿದು ಇದೀಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಎರಡು ದಿವಸಗಳ ದೇಸಿ ಜಗಲಿ ಎಂಬ ಹೆಸರಿನಲ್ಲಿ ಕಥಾ ಕಮ್ಮಟದ ಮೂಲಕ ಗ್ರಾಮೀಣ ಪ್ರತಿಭೆಗಳ ಶೋಧನೆಗೆ ಮುಂದಾಗಿದ್ದು, ಸಾವಿರಾರು ಗ್ರಾಮೀಣ ಪ್ರತಿಭೆಗಳಿಗೆ ಈ ಕಾರ್ಯಕ್ರಮ ವರದಾನವಾಗುವ ನಿರೀಕ್ಷೆಗಳಿವೆ. ಜಿಲ್ಲೆಯ ನವ ಸಾಹಿತಿಗಳು ಹಾಗೂ ಪ್ರತಿಭಾನ್ವಿತ ಯುವಕರು ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಗುರುನಾಥ ರಾಜಗೀರಾ ಮನವಿ ಮಾಡಿದ್ದಾರೆ.